ನವದೆಹಲಿ: ಕಲ್ಲಿದ್ದಲು ಮತ್ತು 2ಜಿ ಹಗರಣದ ಆರೋಪಿಗಳೊಂದಿಗೆ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಅವರು ಸಭೆ ನಡೆಸಿರುವುದು ಸಮಂಜಸವಲ್ಲ, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ತನಿಖಾಧಿಕಾರಗಳ ಗೈರಿನಲ್ಲಿ ಸಿನ್ಹಾ ಅವರು ಆರೋಪಿಗಳನ್ನು ಭೇಟಿಯಾಗಿರುವ ಆರೋಪ ಗಂಭೀರದ್ದಾಗಿದೆ, ಈ ಪ್ರಕರಣ ವಿಸ್ತೃತ ವರದಿಯನ್ನು ತನಗೆ ಜುಲೈ 6ರೊಳಗೆ ವರದಿ ನೀಡಬೇಕು ಎಂದು ಸೆಂಟ್ರಲ್ ವೆಜಿಲೆನ್ಸ್ ಕಮಿಷನ್ಗೆ ನ್ಯಾಯಾಧೀಶ ಮದನ್ ಬಿ ಲೊಕುರ್ ತಿಳಿಸಿದ್ದಾರೆ.
ವಕೀಲ ಪ್ರಶಾಂತ್ ಭೂಷಣ್ ಅವರು ಎನ್ಜಿಓವೊಂದರ ಪರವಾಗಿ ಸಿನ್ಹಾ ವಿರುದ್ಧ ಸುಪ್ರೀಂಗೆ ಸರ್ಜಿ ಸಲ್ಲಿಸಿದ್ದರು. ಅಲ್ಲದೇ ಅವರ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದರು.
ಸಿನ್ಹಾ ಅವರ ನಿವಾಸಕ್ಕೆ ಕಲ್ಲಿದ್ದಲು ಮತ್ತು 2ಜಿ ಹಗರಣದ ಆರೋಪಿಗಳು ಆಗಮಿಸಿದ್ದರು, ಈ ಬಗ್ಗೆ ವಿಸಿಟರ್ ಬುಕ್ನಲ್ಲಿ ದಾಖಲೆ ಇದೆ ಎಂದು ಎನ್ಜಿಒವೊಂದು ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.