ಮುಂಬಯಿ ಜೈನ ಸಮುದಾಯದ ಅತೀ ಪ್ರಮುಖ ದೇಗುಲ ಎನಿಸಿದ ಗೋದಿಜಿ ಪಾರ್ಶ್ವನಾಥ ದೇಗುಲ 200ನೇ ವರ್ಷವನ್ನು ಪೂರೈಸಿದ ಶುಭ ಸಂದರ್ಭದಲ್ಲಿ 2012ರ ಎಪ್ರಿಲ್ 17ರಂದು ಅಂಚೆ ಇಲಾಖೆಯು ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆಗೊಳಿಸಿತ್ತು.
ಜೈನರ 23ನೇ ತೀರ್ಥಾಂಕರ ಪಾರ್ಶ್ವನಾಥರ ಹೆಸರಲ್ಲಿ ಗೋದಿಜಿ ಪಾರ್ಶ್ವನಾಥ ದೇಗುಲವನ್ನು ಮುಂಬಯಿಯಲ್ಲಿ ನಿರ್ಮಿಸಲಾಗಿದೆ. ಇದರ ಗರ್ಭಗುಡಿಯಲ್ಲಿ ಪಾರ್ಶ್ವನಾಥನ ಪ್ರತಿಮೆ ಇದೆ. ಇದರ ಮೂಲ ವಿಗ್ರಹ 1.5 ಅಡಿ ಎತ್ತರವಿದ್ದು, ಪಾಕಿಸ್ಥಾನದ ತರ್ಪಕರ್ ಜಿಲ್ಲೆಯ ಗೋರಿಯಲ್ಲಿದೆ. ಮೂಲ ದೇಗುಲ ಇನ್ನೂ ಇದೆಯಾದರೂ ಅದು ಪಾಳು ಬಿದ್ದಿದೆ.
ಗೋದಿಜಿ ಪಾರ್ಶ್ವನಾಥ ದೇಗುಲದಲ್ಲಿನ ಮೂಲ ವಿಗ್ರಹವನ್ನು ರಾಜಸ್ಥಾನದ ಹಮ್ರಿಪುರ್ನಿಂದ ತರಲಾಗಿದೆ.
18ನೇ ಶತಮಾನದ ಆರಂಭದಲ್ಲಿ ಈ ದೇಗುಲವನ್ನು ಮುಂಬಯಿಯ ಬಂದರು ಪ್ರದೇಶದಲ್ಲಿ ನಿರ್ಮಿಸಲಾಗಿತ್ತು, ಆದರೆ ಬೆಂಕಿ ಅನಾಹುತದ ಪರಿಣಾಮವಾಗಿ ಇದನ್ನು 1868ರಲ್ಲಿ ಮುಂಬಯಿಯ ಪೈದೋನಿ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು. ಇಲ್ಲಿ ಇಟ್ಟಿಗೆ ಮತ್ತು ಮರಗಳ ಬದಲು ಸಂಪೂರ್ಣವಾಗಿ ಮೂರು ಅಂತಸ್ತುಗಳಿಗೆ ಮಾರ್ಬಲ್ ಅಳವಡಿಸಲಾಯಿತು.
ಗೋದಿಜೀ ದೇಗುಲ ಮುಂಬಯಿಯ ಜೈನ ಸಮುದಾಯದ ಅತೀ ಪ್ರಮುಖ ದೇಗುಲವಾಗಿದೆ. 3 ಅಂತಸ್ತಿನ ಈ ದೇಗುಲದಲ್ಲಿ 226 ಕಂಬಗಳಿವೆ. 16 ಪೂಜಾ ಸ್ಥಳಗಳಿವೆ, ಅಮೂಲ್ಯ ಲೋಹಗಳಿಂದ ತಯಾರಿಸಲಾದ 155 ವಿಗ್ರಹಗಳಿವೆ. ಇವುಗಳ ಪೈಕಿ 83 ಮಾರ್ಬಲ್ ವಿಗ್ರಹಗಳಿವೆ. 2 ಕ್ರಿಸ್ಟಲ್ ವಿಗ್ರಹಗಳಿವೆ. 73 ಸಣ್ಣ ಬೆಳ್ಳಿಯ ವಿಗ್ರಹಗಳಿವೆ.
ಈ ದೇಗುಲದ ಮಧ್ಯದಲ್ಲಿರುವ ಗುಮ್ಮಟ ಯಾವುದೇ ಸಹಾಯವಿಲ್ಲದೆ ಉದ್ದವಾಗಿ ಸ್ಥಿರವಾಗಿ ನಿಂತಿರುವುದು ವಿಶೇಷ. ಅತೀದೊಡ್ಡ ಗ್ರಂಥಾಲಯವನ್ನೂ ಈ ದೇಗುಲದ ಹೊಂದಿದ್ದು, ಹಲವಾರು ಭಾಷೆಗಳ ಪ್ರಾಚೀನ ಗ್ರಂಥಗಳು ಇಲ್ಲಿ ಲಭ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.