ಗಂಗಾ ರಾಮ್ ಒರ್ವ ಅದ್ಭುತ ಎಂಜಿನಿಯರ್, ಒರ್ವ ಪ್ರಮುಖ ಸಮಾಜ ಸುಧಾರಕರು. ಅಂಚೆ ಇಲಾಖೆ ಇವರ ಗೌರವಾರ್ಥ 1977ರಲ್ಲಿ ಪೋಸ್ಟಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಅವರ ಭಾವ ಚಿತ್ರದೊಂದಿಗೆ ದೆಹಲಿಯ ಗಂಗಾರಾಮ್ ಆಸ್ಪತ್ರೆ ಕಟ್ಟಡ ಈ ಸ್ಟ್ಯಾಂಪ್ನಲ್ಲಿದೆ.
1851ರ ಎಪ್ರಿಲ್ 13ರಂದು ಈಗಿನ ಪಾಕಿಸ್ಥಾನದಲ್ಲಿರುವ ಮಂಗತ್ವಲದಲ್ಲಿ ಗಂಗಾ ರಾಮ್ ಅವರು ಜನಿಸಿದರು. ಅದ್ಭುತ ಶೈಕ್ಷಣಿಕ ತಿಳುವಳಿಕೆ ಪಡೆದ ಬಳಿಕ ಸಾರ್ವಜನಿಕ ಕಾರ್ಯ ವಿಭಾಗದಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿ ಸೇರ್ಪಡೆಗೊಂಡರು. ನಗರಪಾಲಿಕೆಯ ನಿರ್ಮಾಣ, ಆಕಾರ ಮತ್ತು ಸಂಸ್ಥೆಗಳಲ್ಲಿ ಇವರು ಪರಿಚಯಿಸಿದ ಯೋಜನೆಗಳು ಮತ್ತು ಪ್ರಕ್ರಿಯೆಗಳು ಭಾರತದಲ್ಲೆ ಪ್ರಥಮ ಎಂಬಂತಿವೆ. ನಂತರದ ತಲೆಮಾರುಗಳು ಕೂಡ ಇದನ್ನೇ ಅನುಸರಿಸಿಕೊಂಡು ಬಂದಿವೆ.
ಕೃಷಿಗೆ ಇವರು ನೀಡಿದ ಕೊಡುಗೆ ಅತ್ಯಂತ ಮಹತ್ವದಾಗಿದೆ, ಭಾರತದ ಎಲ್ಲಾ ಯೋಜನೆಗಳಿಗೆ, ಶ್ರೀಮಂತಿಕೆಗೆ, ಅಭಿವೃದ್ಧಿಗೆ ಕೃಷಿಯೇ ಅಡಿಪಾಯ ಎಂಬುದು ಇವರ ಅಚಲ ನಂಬಿಕೆಯಾಗಿತ್ತು. ಇವರ ಪ್ರಯತ್ನ, ಸ್ಫೂರ್ತಿ ಮತ್ತು ಎಂಜಿನಿಯರಿಂಗ್ ಕೌಶಲ್ಯದಿಂದಾಗಿ ಒಣಭೂಮಿಯಾಗಿದ್ದ ಪಂಜಾಬ್ ನಗುವಂತಾಯಿತು, ಅಲ್ಲಿ ಹಸಿರು ಕಾಣಿಸಿಕೊಂಡಿತು.
ಗಂಗಾ ರಾಮ್ ಒಬ್ಬ ಸಮಾಜ ಸುಧಾರಕರೂ ಹೌದು, ದೂರದೃಷ್ಟಿಯ ಚಿಂತನೆ ಹೊಂದಿದ್ದ ಅವರು ವರದಕ್ಷಿಣೆ, ಬಾಲ್ಯವಿವಾಹಗಳನ್ನು ಕಟುವಾಗಿ ಖಂಡಿಸಿದ್ದರು. ವಿಧವಾ ವಿವಾಹವನ್ನು ಪ್ರತಿಪಾದಿಸಿದ್ದರು. ಬಿಡುವಿನ ಶಿಕ್ಷಣ ಮತ್ತು ವಯಸ್ಕರ ಶಿಕ್ಷಣಕ್ಕಾಗಿ ಸಂಸ್ಥೆಗಳನ್ನೂ ತೆರೆದರು.
ತಮ್ಮೆಲ್ಲಾ ಆದಾಯವನ್ನು ಚಾರಿಟೇಬಲ್ ಟ್ರಸ್ಟ್ಗೆ ದಾನ ಮಾಡಿದ ಇವರು, ಅದರ ಮುಖೇನ ಸಾಮಾಜಿಕ ಸಬಲೀಕರಣಕ್ಕೆ ದುಡಿದರು. ಬಳಿಕ ಟ್ರಸ್ಟ್ಗೆ ಗಂಗಾ ರಾಮ್ ಟ್ರಸ್ಟ್ ಎಂದು ನಾಮಕರಣ ಮಾಡಲಾಯಿತು. ಈ ಟ್ರಸ್ಟ್ ದೇಶ ವಿಭಜನೆಯ ವೇಳೆ ತನ್ನೆಲ್ಲಾ ಆಸ್ತಿಯನ್ನು ಕಳೆದುಕೊಂಡಿತು. ಆದರೂ ಇಂದಿಗೂ ದೆಹಲಿಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿದೆ.
ಗಂಗಾರಾಮ್ ಅವರು 1927ರ ಜುಲೈ 10ರಂದು ಇಹಲೋಕತ್ಯಜಿಸಿದರು.
Courtesy : Stamp Today Group (Sri Jaganath mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.