ನವದೆಹಲಿ : ಫೋರ್ಡ್ ಫೌಂಡೇಷನ್ ಮತ್ತು ಗ್ರೀನ್ಪೀಸ್ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿರುವ ಕೇಂದ್ರ ಸರಕಾರದ ನಿಲುವಿಗೆ ಆಕ್ಷೇಪ ಎತ್ತಿರುವ ಅಮೆರಿಕಾದ ನಿಲುವಿನ ವಿರುದ್ಧ ಆರ್ಎಸ್ಎಸ್ ತನ್ನ ಆಕ್ಷೇಪ ವ್ಯಕ್ತ ಪಡಿಸಿದೆ.
ಭಾರತದ ಸಾರ್ವಭೌಮತೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅಮೆರಿಕ ಗೌರವಿಸಿಬೇಕು, ಇಲ್ಲದಿದ್ದರೆ ಆ ದೇಶದ ವರ್ತನೆಯನ್ನು ವಿದೇಶಾಂಗ ನೀತಿಯ ಹಸ್ತಕ್ಷೇಪ ಎಂದು ಪರಿಗಣಿಸಬೇಕಾಗುತ್ತದೆ’ ಎಂದು ಆರ್.ಎಸ್.ಎಸ್. ಅಮೆರಿಕಾಗೆ ಕಿವಿಮಾತು ಹೇಳಿದೆ.
ನಿಯಮಗಳನ್ನು ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದ ವರ್ಗಾವಣೆ ಮಾಡಿ ಈ ಎರಡು ಎನ್ಜಿಓಗಳು ವ್ಯವಹಾರ ನಡೆಸಿವೆ. ಈ ಮೂಲಕ ರಾಷ್ಟ್ರೀಯ ಅಭಿವೃದ್ಧಿಗೆ ಇದು ಮಾರಕವಾಗುತ್ತಿದೆ ಎಂದು ಆರ್.ಎಸ್.ಎಸ್. ಮುಖವಾಣಿ ಆರ್ಗನೈಝರ್ನಲ್ಲಿ ಹೇಳಲಾಗಿದೆ.
ಈ ಸರರ್ಕಾರೇತರ ಸಂಸ್ಥೆಗಳ ಸಮರ್ಥನೆಗೆ ಇಳಿದಿರುವ ಅಮೆರಿಕಾ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಬಳಿ ಸ್ಪಷ್ಟನೆ ಕೇಳುತ್ತಿದೆ. ಮೊದಲು ಅಮೆರಿಕಾ ಭಾರತದ ಸಾರ್ವಭೌಮತೆಯನ್ನು, ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸಬೇಕು ಎಂದಿದೆ.
ಅಲ್ಲದೇ ಇಂತಹ ಎನ್ಜಿಓಗಳನ್ನು ರದ್ದುಪಡಿಸುವ ಮೂಲಕ ಭಾರತ ಅಭಿವೃದ್ಧಿದಾಯಕ ಕ್ರಮವನ್ನು ಕೈಗೊಂಡಿದೆ ಎಂದು ಆರ್.ಎಸ್.ಎಸ್. ಶ್ಲಾಘಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.