ಸುಳ್ಯ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರಿಗೆ ವಿತರಿಸಲು ಮೀಸಲಿರಿಸಿದ ಡಿ.ಸಿ.ಮನ್ನಾ ಭೂಮಿಯನ್ನು ಗುರುತಿಸಿ ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಗಳ ನಾಗರೀಕ ಹಕ್ಕು ಜಾಗೃತ ಸಮಿತಿಯ ಆಶ್ರಯದಲ್ಲಿ ಸುಳ್ಯ ತಾಲೂಕು ಡಿ.ಸಿ.ಮನ್ನಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು. ಸುಳ್ಯದ ಗಿರಿದರ್ಶಿನಿ ಸಭಾ ಭವನದಲ್ಲಿ ನಡೆದ ಸಭೆಯ ಬಳಿಕ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತೆರಳಿ ಹಕ್ಕೊತ್ತಾಯವನ್ನು ಮಂಡಿಸಿ ಬಳಿಕ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ತಾಲೂಕು ಡಿ.ಸಿ.ಮನ್ನಾ ಹೋರಾಟ ಸಮಿತಿಯ ಅಧ್ಯಕ್ಷ ಅಚ್ಚುತ ಮಲ್ಕಜೆ `ಸುಳ್ಯ ತಾಲೂಕಿನಲ್ಲಿ ಸುಮಾರು 2500 ಎಕ್ರೆಗಳಷ್ಟು ಡಿ.ಸಿ.ಮನ್ನಾ ಭೂಮಿ ಇದೆ. ಎಲ್ಲಾ ಗ್ರಾಮಗಳಲ್ಲಿರುವ ಜಾಗದ ವಿವರ ನೀಡಬೇಕು, ಜಾಗದ ಮೂಲ ದಾಖಲೆಯನ್ನು ಪರಿಶೀಲಿಸಲು ಸಮಿತಿಯ ಸದಸ್ಯರಿಗೆ ಅನುಮತಿ ನೀಡಬೇಕು. ಗುರುತಿಸಲಾದ ಭೂಮಿಯನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಮತ್ತು ಡೀಮ್ಡ್ ಫಾರೆಸ್ಟ್ನಲ್ಲಿರುವ ಡಿ.ಸಿ.ಮನ್ನಾ ಭೂಮಿಯನ್ನು ಪ್ರತ್ಯೇಕಿಸಿ ಗುರುತಿಸಬೇಕು ಎಂದು ಆಗ್ರಹಿಸಿದರು. ಸುಳ್ಯ ತಾಲೂಕಿನಲ್ಲಿ ಮೀಸಲಿಟ್ಟ ಡಿ.ಸಿ.ಮನ್ನಾ ಭೂಮಿ ಬಹುತೇಕ ಆಕ್ರಮಣ ಆಗಿದೆ. ಆಕ್ರಮಣ ಮಾಡಿರುವ ಜಾಗಕ್ಕೆ ಬದಲಾಗಿ ಸೂಕ್ತವಾದ ಸ್ಥಳವನ್ನು ಬೇರೆಡೆ ಗುರುತಿಸಿ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.
ಯಾವ ಯಾವ ಗ್ರಾಮದಲ್ಲಿ ಎಷ್ಟು ಡಿ.ಸಿ.ಮನ್ನಾ ಭೂಮಿ ಇದೆ ಎಂಬುದನ್ನು ತಿಳಿಯಲು ಡಿ.ಸಿ.ಮನ್ನಾ ಭೂಮಿಯ ಮೂಲ ದಾಖಲೆಯನ್ನು ನೀಡಬೇಕು. ನಾವು ನಮ್ಮ ಹಕ್ಕಿಗಾಗಿ ಮತ್ತು ಸ್ವಾಭಿಮಾನದ ಬದುಕಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಸೀತಾನಂದ ಬೇರ್ಪಡ್ಕ ಮತ್ತು ಉಪಾಧ್ಯಕ್ಷ ನಂದರಾಜ ಸಂಕೇಶ ಹೇಳಿದರು.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೌತಮ್, ಕಾರ್ಯದರ್ಶಿ ಸಂಜಯಕುಮಾರ್ ಪೈಚಾರ್, ಕಾನೂನು ಸಲಹೆಗಾರ ನಾರಾಯಣ ಜಟ್ಟಿಪಳ್ಳ, ಆನಂದ ಕೆಂಬಾರೆ, ಶಂಕರ್ ಪೆರಾಜೆ, ಕೆ.ಎಂ.ಬಾಬು ಜಾಲ್ಸೂರು, ಆನಂದ ಬೆಳ್ಳಾರೆ, ಲಕ್ಷ್ಮೀ ಸುಬ್ರಹ್ಮಣ್ಯ, ದಾಸಪ್ಪ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.