ಮಂಗಳೂರು : ಬದಲಾವಣೆಯತ್ತ ಭಾರತ, ಅತ್ಯುತ್ತಮ ಬಜೆಟ್ ಮಂಡನೆಗಾಗಿ ಕೇಂದ್ರದ ವಿತ್ತ ಸಚಿವರಾದ ಶ್ರೀ ಅರುಣ್ ಜೇಟ್ಲಿ ಹಾಗೂ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಗೆ ದಕ್ಷಿಣ ಕನ್ನಡ ಬಿಜೆಪಿ ಅಭಿನಂದಿಸುತ್ತದೆ.
ಅಭಿವೃದ್ಧಿಯ ಮಂತ್ರವನ್ನು ಜಪಿಸುತ್ತಾ ಬಡವರ ಪರವಾಗಿ ಮಾತನಾಡುತ್ತಾ ದೇಶದ ಪ್ರಗತಿಯನ್ನು ಕೇವಲ ಪುಸ್ತಕಕ್ಕೆ ಸೀಮಿತವಾಗಿಸುತ್ತಾ ಕಾಂಗ್ರೆಸ್ನ ಹತ್ತು ವರ್ಷಗಳ ದುರಾಡಳಿತ ಭಾರತ ವಿಶ್ವದಲ್ಲಿ ಹಿಂದೆ ಬೀಳುವಂತೆ ಮಾಡಿತ್ತು. ಆದರೆ ಸದ್ದಿಲ್ಲದೆ, ಟೀಕೆ-ಟಿಪ್ಪಣಿಗಳನ್ನು ಮಾಡದೆ ಕೇಂದ್ರದ ಮೋದಿಜಿ ನೇತೃತ್ವದ ಸರ್ಕಾರ ಭಾರತವನ್ನು ಪ್ರಗತಿಪಥದಲ್ಲಿ ಮುನ್ನಡೆಸುತ್ತಿದೆ ಎಂಬುದಕ್ಕೆ 2017-18 ರ ಬಜೆಟ್ ಜೀವಂತ ನಿದರ್ಶನವಾಗಿ ನಮ್ಮ ಮುಂದಿದೆ.
ಭಾರತದ ಬೆನ್ನುಲುಬಾಗಿ ನಿಂತಿರುವ ಗ್ರಾಮೀಣ ಪ್ರದೇಶಗಳಿಗೆ ಮೀಸಲಾಗಿಸುವ ಹಣದ ವ್ಯವಸ್ಥೆಯಲ್ಲಿ ಶೇ.20 ರಷ್ಟು ಏರಿಸುವ ಮೂಲಕ ಗ್ರಾಮೀಣಾಭಿವೃದ್ಧಿ ತನ್ನ ಬದ್ಧತೆಯನ್ನು ಎತ್ತಿ ತೋರಿಸಿರುವುದು ಮಾತ್ರವಲ್ಲದೆ ರೈತ ಸ್ನೇಹಿ ಎಂಬುದನ್ನು ಸಾಬೀತು ಪಡಿಸಿದೆ. ಸುಮಾರು ಹತ್ತು ಲಕ್ಷ ಕೋಟಿಗಳಷ್ಟು ಹಣವನ್ನು ಕೃಷಿಗೆ ಮೀಸಲಿಟ್ಟಿರುವುದು ರೈತರ ಪರ ಸರ್ಕಾರಕ್ಕಿರುವ ಕಾಳಜಿಗೆ ಇರುವ ಕೈಗನ್ನಡಿಯಾಗಿದೆ. ಸುಮಾರು ಹತ್ತು ಸಾವಿರ ಕೋಟಿಗಳಷ್ಟು ಹಣವನ್ನು ನರೇಗಾ ಯೋಜನೆ ಮೀಸಲಾತಿಗೆ, ಒಟ್ಟು ಗ್ರಾಮೀಣಾಭಿವೃದ್ಧಿಗೆ ಕಳೆದ ವರ್ಷಕ್ಕಿಂತ ಶೇ. 24 ರಷ್ಟು ಹೆಚ್ಚಾಗಿರುವುದು ಟೀಕಾಕಾರರನ್ನು ಅವಿತುಕೊಳ್ಳುವಂತೆ ಮಾಡಿದೆ. ದೇಶದ ಇನ್ಪ್ರಾಸ್ಟ್ರಕ್ಚರ್ ವ್ಯವಸ್ಥೆಗಳಿಗೆ ಸುಮಾರು 4 ಲಕ್ಷ ಕೋಟಿ, ರಕ್ಷಣಾ ವ್ಯವಸ್ಥೆಗೆ 2.74 ಲಕ್ಷ ಕೋಟಿಗಳನ್ನು ಮೀಸಲಿಟ್ಟಿರುವುದು ಇತಿಹಾಸದಲ್ಲಿ ಇದೇ ಪ್ರಥಮ ಹಾಗೂ ಇಟ್ಟಿರುವ ದಿಟ್ಟ ಹೆಜ್ಜೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳ ಮೇಲೆ ಹೇರಲಾಗುವ ಕಾರ್ಪೋರೇಟ್ ತೆರಿಗೆಯನ್ನು ಶೇ. ೫ ರಷ್ಟು ಇಳಿಮುಖಗೊಳಿಸಿರುವುದು ಬರುವಂತಹ ದಿನಗಳಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಾಗಿದೆ ಮಾತ್ರವಲ್ಲದೆ ಔದ್ಯೋಗಿಕ ರಂಗದಲ್ಲಿ ಹೊಸ ಕ್ರಾಂತಿಯೊಂದು ಸೃಷ್ಟಿಸಲಿದೆ. ಇಷ್ಟು ಮಾತ್ರವಲ್ಲದೆ 2.5 ಲಕ್ಷ- 5 ಲಕ್ಷದವರೆಗಿನ ವೈಯುಕ್ತಿಕ ಆದಾಯದ ತೆರಿಗೆಯನ್ನು ಶೇ. 50 ರಷ್ಟು ಇಳಿಸಿರುವ ಅತ್ಯಂತ ಕ್ರಾಂತಿಕಾರಿ ಮಾತ್ರವಲ್ಲದೆ ಮಧ್ಯಮ ವರ್ಗಾ ಹಾಗೂ ವೇತನಾಧಾರಿತ ಕುಟುಂಬಗಳ ಶ್ರೇಯಸ್ಸಿಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.
ಒಟ್ಟಾರೆ ಅತ್ಯದ್ಭುತವಾದ ಬಜೆಟ್ ಘೋಷಿಸಿದ ಶ್ರೀ ಅರುಣ್ ಜೇಟ್ಲಿ ಹಾಗೂ ಶ್ರೀ ನರೇಂದ್ರ ಮೋದಿಯವರು ಹೃತ್ಪೂರ್ವಕ ಅಭಿನಂದನೆಗಳನ್ನು ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ಶ್ರೀ ವಿಕಾಸ್ ಪುತ್ತೂರು ಅರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.