ಇದು ಮಹಾಜನ ಸಾಗರ, ಮಹಾಜನ ಸಾಗರ, ಮಹಾಜನ ಸಾಗರ, ಜನಜಾತ್ರೆ ಈ ದೇಶದ ಅತ್ಯದ್ಭುತ ಜನಸಾಗರ ಜನಜಾತ್ರೆಯೆಂದರೇ ಓಡಿಶಾದ ಪುರಿಯ ಶ್ರಿ ಜಗನ್ನಾಥ ಜಾತ್ರೆ, ಅದನ್ನು ಮೀರಿಸುವಂತಹ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರೆ ಎಂದು ಖ್ಯಾತ ವಿಜ್ಞಾನಿ, ಭಾರತ ರತ್ನ ಪುರಸ್ಕೃತ ಪ್ರೋ.ಸಿ.ಎನ್.ಆರ್ ರಾವ್ ಅವರು ಜಾತ್ರಾ ಮಹೋತ್ಸವವನ್ನು ಕಂಡು ಉದ್ಘಾರವೆತ್ತಿದ್ದಾರೆ ಹಾಗೂ ಮನದುಂಬಿ ಕೊಂಡಾಡಿದ್ದಾರೆ.
ಬ್ರಾಹ್ಮಿಲಿಪಿಯ, ಪ್ರಾಕೃತಭಾಷೆಯ ಸಾಮ್ರಾಟ ಅಶೋಕನ ಶಾಸನಗಳು ಇಲ್ಲಿವೆ. ಒಂದು ಗವಿಮಠದ ಹಿಂಬದಿಯ ಗುಡ್ಡದಲ್ಲಿದೆ. ಇನ್ನೊಂದು ಮಳೇ ಮಲ್ಲೇಶ್ವರ ಬೆಟ್ಟದ ಪಾಲ್ಕಿಗುಂಡಿನಡಿಯಲ್ಲಿದೆ. ಇಲ್ಲಿನ ಗುಹೆಗಳಲ್ಲಿ ಶಿಲಾಯುಗದ ಆದಿಮಾನವನ ವರ್ಣರಂಜಿತ ಚಿತ್ರಗಳು ದೊರಕಿವೆ. ಹೀಗಾಗಿ ಈ ಸ್ಥಳದ ಇತಿಹಾಸವನ್ನು ಸ್ತಪೂರ್ವದತ್ತ ಕೊಂಡೊಂ ವೆಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊಪ್ಪಳ ಹಾಗೂ ಕೊಪ್ಪಳ ನಾಡಿಗೆ ಅಪೂರ್ವ ಇತಿಹಾಸವಿದ್ದಂತೆಯೇ ಅಷ್ಟೇ ಹಿರಿದಾದ ಇತಿಹಾಸ, ಭವ್ಯ ಪರಂಪರೆ ಸಂಸ್ಥಾನ ಗವಿಮಠಕ್ಕೂ ಇದೆ. 1008 ರಲ್ಲಿಯೇ ಪೂಜ್ಯ ಜ|| ರುದ್ರಮುನಿ ಶಿವಯೋಗಿವರ್ಯರಿಂದ ಸಂಸ್ಥಾಪಿಸಲ್ಪಟ್ಟ ಗವಿಮಠ ಈಗಾಗಲೇ ಹದಿನೆಂಟು ಪೀಠಾಧೀಶರನ್ನು ಹೊಂದಿದ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
ಶ್ರೀ ಗವಿಮಠದ ಭವ್ಯ ಪರಂಪರೆಯಲ್ಲಿ ಸಾಗಿ ಬಂದ ಜ|| ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಅನೇಕ ಜನಪರ ಕಾರ್ಯಗಳನ್ನು, ಸಮಾಜೋಧಾರ್ಮಿಕ ಕಾರ್ಯಗಳನ್ನು iಡುತ್ತಾ ಈ ನಾಡನ್ನು, ನಾಡವರನ್ನೂ ಉದ್ಧರಿಸಿದ್ದಾರೆ. ಪೂಜ್ಯರು ಗೈದ ಕಾರ್ಯಗಳೆಲ್ಲವೂ ಭಾವುಕ ಭಕ್ತಿರಿಗೆ ಪವಾಡ ಸದೃಶ್ಯಗಳಾಗಿ ಕಂಡಿವೆ. ಇಂತಹ ಜನಪರ ಕಾರ್ಯಗಳನ್ನು ಮಾಡಿದ ಜ|| ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಜನಮಾನಸದಲ್ಲಿ ಇಂದಿಗೂ ನೆಲೆಯೂರಿದ್ದಾರೆ. ಈ ಎಲ್ಲಾ ಕಾರಣ ಗಳಿಂದಾಗಿ ತಮಗಿಂತ ಹಿಂದಿನ ಎಲ್ಲಾ ಶಿವಯೋಗಿಗಳವರನ್ನು ಮರೆಯಿಸಿಬಿಟ್ಟಿದ್ದಾರೆ. ಮುಂದಿನವರೆಗೆ ಭಕ್ತರ ಹೃನ್ಮಂದಿರದಲ್ಲಿ ಸ್ಥಾನವನ್ನು ತೆಗೆದಿರಿಸಿದ್ದಾರೆ.
ಕೊಪ್ಪಳದ ನೆರೆಯ ’ಮಂಗಳಾಪುರ’ವೇ ಜ|| ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಜನ್ಮಸ್ಥಳ. ಮಾಹೇಶ್ವರ ದಂಪತಿಗಳಾಗಿದ್ದ ಮಹಾ ದೇವಯ್ಯ ಹಾಗೂ ಗುರುಲಿಂಗಮ್ಮನವರೇ ಪೂಜ್ಯರ ತಂದೆ ತಾಯಿಗಳು. ಮಳೆ ಮಲ್ಲೇಶನ ಸಾನಿಧ್ಯದಲ್ಲಿಯೇ ಲಿಂಗಾಂಗ ಸಮರಸದ ಬೆಳಗನ್ನು ಆ ಲಿಂಗದ ಬೆಳಕಿನಲ್ಲಿಯೇ ಧನ್ಯತೆಯ ಭಾವ ಕಂಡು ಪುಳಕಿತರಾದ ಮಹಿಮಯೋಗಿ ಶ್ರೀ ಗವಿಸಿದ್ಧೇಶ್ವರರು. ಶ್ರೀಮಠದ ಅಂದಿನ ದಶಮ ಪೀಠಾಧೀಶರಾಗಿದ್ದ ಜ|| ಚನ್ನಬಸವ ಶಿವಯೋಗಿಗಳ ಆಂತರ್ಯದ ಧ್ವನಿಗೆ ಓಗೊಟ್ಟಂತೆ, ಗವಿಮಠದತ್ತ ಪಯಾಣಿಸಿದ ಗವಿಸಿದ್ಧೇಶ್ವರರು ಗುರುಗಳ ಸಾನಿಧ್ಯದಲ್ಲಿ ಅಧ್ಯಯನ ನಿರತರಾದರು.
ಅನ್ನದಾಸೋಹ ಅಕ್ಷರದಾಸೋಹ ಆಧ್ಯಾತ್ಮ ದಾಸೋಹಗಳಂತಹ ತ್ರಿವಿಧ ದಾಸೋಹಗನ್ನು ತಮ್ಮ ನಿರಂತರ ಕಾಯಕವನ್ನಾಗಿ ಮಾಡಿಕೊಂಡು ಬಂದ ಶ್ರೀಮಠದ ಎಲ್ಲ ಶಿವಯೋಗಿಗಳಂತೆ ಗವಿಸಿದ್ಧೇಶ್ವರರು ಈ ಕಾರ್ಯದಲ್ಲಿಯೇ ನಿರತರಾದರು. ಗುರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶ್ರೀಮಠದ ಹನ್ನೊಂದನೇ ಪೀಠಾಧಿಪತಿಗಳಾಗಿ ಸಮಾಜೋಧಾರ್ಮಿ ಕಾರ್ಯಗಳಲ್ಲಿಯೇ ಸದಾ ತಲ್ಲಿನರಾಗಿರುತ್ತಿದ್ದರು.
ಲೇಖಕರು: ಶ್ರೀ ಎಸ್.ಎಮ್ ಕಂಬಾಳಿಮಠ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.