News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಡಿಪಾರು ಬೆದರಿಕೆಗೆ ಹೆದರುವುದಿಲ್ಲ: ಹಲಗತ್ತಿ

ಹುಬ್ಬಳ್ಳಿ: ಸರ್ಕಾರಿ ಆಸ್ತಿ ಹಾನಿ ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಕಾರಣಕ್ಕಾಗಿ ಯಾಕೆ ಗಡಿಪಾರು ಮಾಡಬಾರದು ಎಂದು ಎಸಿಯವರು ತಮಗೆ ನೋಟಿಸ್ ನೀಡಿದ್ದು, ಇಂಥ ಬೆದರಿಕೆಗೆ ತಾವು ಬೆದರುವುದಿಲ್ಲ ಎಂದು ಕಳಸಾ ಬಂಡೂರಿ ಹೋರಾಟಗಾರ ರಮೇಶ ಹಲಗತ್ತಿ ಪ್ರತಿಕ್ರಿಯಿಸಿದ್ದಾರೆ.

ಜ.16 ರಂದು ಧಾರವಾಡ ಎಸಿ ಕಚೇರಿಗೆ ಸತ್ಯನಾರಾಯಣ ಹೆಬಸೂರು ಅವರೊಂದಿಗೆ ತಾವೂ ಖುದ್ದು ಹಾಜರಾಗುವಂತೆ ತಿಳಿಸಿದ್ದಾರಂತೆ.

ಸತ್ಯನಾರಾಯಣ ಹೆಬಸೂರು ಹಾಗೂ ರಮೇಶ ಹಲಗತ್ತಿ ಇತ್ತೀಚೆಗೆ ನಡೆದ ಮಹಾದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ನಾವು ಯಾವುದೇ ಕೊಲೆ, ದರೋಡೆ ಮಾಡಿಲ್ಲ. ನಮ್ಮ ಭಾಗದ ಜೀವಜಲಕ್ಕಾಗಿ ನಾವು ಪ್ರಾಣ ಕೊಡಲೂ ಸಿದ್ಧ ಎಂದಿರುವ ಅವರು, ಎಸಿ ಕಚೇರಿಗೆ ಖುದ್ದು ಹಾಜರಾಗುತ್ತೇವೆ. ಅವರು ಗಡಿಪಾರು ಮಾಡಿದರೂ ಚಿಂತೆಯಿಲ್ಲ. ಹೋರಾಟ ಇನ್ನೂ ತೀವ್ರಗತಿಯಲ್ಲಿ ಸಾಗುತ್ತದೆ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top