ಬದಿಯಡ್ಕ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಅಪಪ್ರಚಾರ ನಡೆಸಲು ಕೇರಳದ ಎಡ ಬಲ ರಂಗಗಳು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿ.ಕೆ.ಸಜೀವನ್ ಹೇಳಿದರು. ಅವರು ಡಿ. 20 ರಂದು ಬದಿಯಡ್ಕ ಪೇಟೆಯಲ್ಲಿ ನಡೆದ ಕಪ್ಪು ಹಣದ ವಿರುದ್ಧ ಎನ್ಡಿಎ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನೆ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೋಟು ರದ್ದತಿ ಎಂಬುದು ತುರ್ತು ಶಸ್ತ್ರ ಕ್ರಿಯೆ ಆಗಿದೆ. ಇದರಿಂದಾಗಿ ಕಾಳ ಧನ ಹೊಂದಿದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದವರು ಹೇಳಿದರು. ಸುಧಾಮ ಗೋಸಟ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಅದ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಬಿ.ಡಿ.ಜೆ.ಎಸ್ ಜಿಲ್ಲಾ ಅಧ್ಯಕ್ಷ ಗಣೇಶ್ ಪಾರಕಟ್ಟ, ರವೀಶ ತಂತ್ರಿ ಕುಂಟಾರು, ಸುನಿಲ್ ಪುಂಡೂರು, ರಾಘವ ಕನಕತ್ತೋಡಿ, ಶೈಲಜ ಭಟ್, ರಾಮಪ್ಪ ಮಂಜೇಶ್ವರ, ಅವಿನಾಶ್ ರೈ ಮೊದಲಾದವರು ಮಾತನಾಡಿದರು. ನ್ಯಾಯವಾದಿ ವಿಜಯನ್ ಸ್ವಾಗತಿಸಿ ಹರೀಶ್ ನಾರಂಪಾಡಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.