ಕಾಸರಗೋಡು: ಇಲ್ಲಿನ ಕೂಡ್ಲು ಸಮೀಪ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಜಾತ್ರೆಯು ವೈಭವಯುತವಾಗಿ ಸಂಪನ್ನಗೊಂಡಿತು. ಡಿ. 4ರಂದು ಬೆಳಗ್ಗೆ ಗಣಪತಿ ಹವನದೊಂದಿಗೆ ಜಾತ್ರೆ ಆರಂಭಗೊಂಡು ಅಂದು ಸಾಮೂಹಿಕ ನಾಗತಂಬಿಲ ಹಾಗೂ ಬಲಿವಾಡುಕೂಟವು ಜರಗಿತು.
ಸಂಜೆ ಮೀಪುಗುರಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘದವತಿಯಿಂದ ಕ್ಷೇತ್ರಕ್ಕೆ ಅಗತ್ಯವಿರುವ ಬೆಳ್ಳಿಯ ಆರತಿ, ಬೆಳ್ಳಿಯ ಕೌಳಿಗೆ ಸೌಟು, ಬೆಳ್ಳಿಯ ತಟ್ಟೆ, ಜಾಗಟೆ, ಪಾಕಶಾಲೆಗೆ ಅಗತ್ಯವಿರುವ ಗ್ರೈಂಡರ್, ಪಾತ್ರೆಗಳನ್ನು ಹುಲ್ಪೆ ಮೆರವಣಿಗೆಯ ಮೂಲಕ ಶ್ರೀ ಕ್ಷೇತ್ರಕ್ಕೆ ತಂದೊಪ್ಪಿಸಲಾಯಿತು.
ರಾತ್ರಿ ಸ್ಥಳೀಯ ಶಿವಕೃಷ್ಣ ಬಾಲಗೋಕುಲದ ಮಕ್ಕಳಿಂದ ನೃತ್ಯಕಾರ್ಯಕ್ರಮಗಳು ನಡೆಯಿತು. ನೃತ್ಯದಲ್ಲಿ ಪಾಲ್ಗೊಂಡ ಎಲ್ಲಾ ಪ್ರತಿಭೆಗಳಿಗೆ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘದ ವತಿಯಿಂದ ಅನುವಂಶಿಕ ಮೊಕ್ತೇಸರರಾದ ಸದಾಶಿವಅವರು ಸ್ಮರಣಿಕೆ ನೀಡಿದರು.
ರಾತ್ರಿ ಪುಣ್ಯಾಹ, ಪ್ರಾಸಾದ ಶಿದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿಯೂ ನಡೆಯಿತು. ಡಿ.5 ರಂದು ಬೆಳಗ್ಗೆ 6 ಗಂಟೆಗೆ ಗಣಪತಿಹವನ ಬಿಂಬ ಶುದ್ಧಿ, ಕಲಶ ಪೂಜೆ, ಕಲಶಾಭಿಷೇಕ ನಡೆಯಿತು. ೧೦ಕ್ಕೆ ಗಂಟೆಗೆ ಅಜಿನ್ ಅಶೋಕ್ ಪಿಲಿಕೋಡ್ ಅವರಿಂದ ಶಾಸ್ತ್ರೀಯ ಸಂಗೀತ, ಮದ್ಯಾಹ್ನ 12 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಸಂಜೆ 6ಕ್ಕೆ ದೀಪಾರಾಧನೆ, ತಂಬಾನ್ ಮಾರಾರ್ ಇವರಿಂದ ತಾಯಂಬಕ, ಶೇಷವನ ಭಕ್ತವೃಂದದವರಿಂದ ಭಜನೆ, 7.30ಕ್ಕೆ ರಾತ್ರಿ ಪೂಜೆ, ಶ್ರೀಭೂತಬಲಿ, ವಿಶೇಷ ಪಂಚವಾದ್ಯ ಸೇವೆ, ಸಿಡಿಮದ್ದು ಸೇವೆ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮುಂತಾದ ಕಾರ್ಯಕ್ರಮಗಳು ನಡೆದುವು.
ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರ ಶುಭಾಶೀರ್ವಾದಗಳೊಂದಿಗೆ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿವರ್ಯರ ನೇತೃತ್ವದಲ್ಲಿ ಅರ್ಚಕರಾದ ಸುಬ್ರಾಯ ಕಾರಂತ, ಗೋಪಾಲಕೃಷ್ಣ ಕಾರಂತ ಇವರ ಸಹಕಾರದೊಂದಿಗೆ ವೈದಿಕ ಕಾರ್ಯಕ್ರಮಗಳು ಜರಗಿತು.
ಅನುವಂಶಿಕ ಮೊಕ್ತೇಸರರಾದ ಸದಾಶಿವ, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್, ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ, ಮಹಿಳಾ ಸಂಘದವರು ಸಹಕರಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.