ಪೆರಡಾಲ : ಪೆರಡಾಲ ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆ ನಾಡಿಗೆ ಮಾದರಿ. ಅಧ್ಯಾಪಕರೊಬ್ಬರು ನಿವೃತ್ತರಾಗುವ ಕಾಲಕ್ಕೆ ರೂಪಾಯಿ ಒಂದು ಲಕ್ಷಕ್ಕಿಂತಲೂ ಹೆಚ್ಚು ಖರ್ಚು ಮಾಡಿ ಶಾಲೆಗೆ ಕುಡಿಯುವ ನೀರಿನ ಬಾವಿ ತೋಡಿಸಿ ಮೋಟಾರು ವ್ಯವಸ್ಥೆ ಮಾಡಿ ಕೊಡುಗೆ ನೀಡಿದ್ದನ್ನು ಬೇರೆಲ್ಲೂ ಕೇಳಲಿಲ್ಲ. ಇದು ನಾಡಿಗೇ ಮಾದರಿ ಎಂದು ಕಾಸರಗೋಡು ಶಾಸಕ ಎನ್. ಎ. ನೆಲ್ಲಿಕುನ್ನು ನುಡಿದರು.
ಪೆರಡಾಲ ಸರಕಾರಿ ಪ್ರೌಢ ಶಾಲೆ ಮತ್ತು ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಗಳ ಜಂಟಿ ರಕ್ಷಕ ಶಿಕ್ಷಕ ಸಮಿತಿಯ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮೀಪದಲ್ಲೆಲ್ಲೂ ಸರಕಾರಿ ಪ್ರೌಢಶಾಲೆ ಇಲ್ಲದ ಕಾರಣದಿಂದಾಗಿ ಮಂಜೂರಾಗಿರುವ ಮತ್ತು ಕನ್ನಡ ಮಲಯಾಳ ಮಾಧ್ಯಮಗಳಲ್ಲಿ ವಿದ್ಯಾರ್ಜನೆ ಮಾಡುವುದಕ್ಕೆ ಅವಕಾಶವಿರುವ ಈ ಶಾಲೆಯನ್ನು ಜೋಪಾನ ಮಾಡುವುದು ರಕ್ಷಕರ ಮತ್ತು ಊರವರ ಕರ್ತವ್ಯ ಎಂದು ಅವರು ಕಿವಿಮಾತು ಹೇಳಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎನ್ ಬಿ ಬಡುವನ್ ಕುಞ್ಞಿ ಅಧ್ಯಕ್ಷತೆ ವಹಿಸಿದರು. ಮಾಜಿ ಸಚಿವ ಸಿಟಿ ಅಹಮ್ಮದ್ ಆಲಿ, ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಶಕ್ಷೆ ಸೈಬುನ್ನಿಸ,ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಓಸೋನ್, ವಾರ್ಡು ಸದಸ್ಯೆ ಶಾಂತ ಬಿ, ಶಾಲಾ ಮೇಲ್ವಿಚಾರಕ ಸಮಿತಿ ಅಧ್ಯಕ್ಷ ಮೊಯ್ದೀನ್ ಕುಞ್ಞಿ ಪಳ್ಳತ್ತಡ್ಕ ಶುಭ ಹಾರೈಸಿದರು. ಪ್ರೌಢ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ರವೀಂದ್ರ ಪಿ ಶಾಲೆಗೆ ಅಗತ್ಯಗಳನ್ನು ಶಾಸಕರಿಗೆ ಮನದಟ್ಟು ಮಾಡಿಸಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಗುರುಮೂರ್ತಿ ನಾಯ್ಕಾಪು ಸ್ವಾಗತಿಸಿ ಅಥ್ಯಾಪಕ ಸಂಘದ ಕಾರ್ಯದರ್ಶಿ ಚಂದ್ರಹಾಸನ್ ನಂಬಿಯಾರ್ ಧನ್ಯವಾದವಿತ್ತರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.