ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ ಅವ್ಯವಸ್ಥೆ ಸರಿಪಡಿಸುವಂತೆ ಬಂಟ್ವಾಳ ತಾಲೂಕು ಗ್ರಾಮ ಪಂಚಾಯತ್ ಪ್ರತಿನಿಧಿಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಪ್ರಭು ಜಿಲ್ಲಾಧಿಕಾರಿಯವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.
ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ ಪುಟ್ಪಾತ್ನಲ್ಲಿ ಹಾಕಿರುವ ಕಾಂಕ್ರೀಟ್ ಸ್ಲ್ಯಾಬ್ಗಳು ಜಖಂಗೊಂಡು ಸುಮಾರು 3 ಮೀಟರ್ನಷ್ಟು ಬಿರುಕು ಬಿಟ್ಟಿದ್ದು, ನಡೆದುಕೊಂಡು ಹೋಗುವ ಪಾದಚಾರಿಗಳು ಆಕಸ್ಮಿಕವಾಗಿ ಬದಿಗೆ ಸರಿದರೆ ರೈಲ್ವೆ ಟ್ರ್ಯಾಕ್ನ ಮೇಲೆ ಬೀಳುವ ಪರಿಸ್ಥಿತಿಯಿದೆ. ಈಗಾಗಲೇ ಹಲವು ಮಂದಿ ಪಾದಾಚಾರಿಗಳು ಇದರಲ್ಲಿ ಸಿಲುಕಿಕೊಂಡ ಘಟನೆಯು ನಡೆದಿದೆ.
ಕಳೆದ 6 ತಿಂಗಳಿನಿಂದ ಇದೇ ಪರಿಸ್ಥಿತಿ ಇದ್ದರೂ ಸಹ ಸದ್ಯ ಕಬ್ಬಿಣದ ತಗಡನ್ನು ಹಾಕಲಾಗಿದೆ. ಇದನ್ನು ಯಾರಾದರೂ ತೆಗೆದರೆ ಪಾದಚಾರಿಗಳಿಗೆ ಸಾವು ಕಟ್ಟಿಟ್ಟ ಬುತ್ತಿ. ರಾ.ಹೆ. ಅಗಲೀಕರಣ ಬಗ್ಗೆ ಪ್ರಚಾರ ಮಾಡಿದರೆ ಸಾಲದು. ಪ್ರಸ್ತುತ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿನ ಅವ್ಯವಸ್ಥೆ ಬಗ್ಗೆ ಹೆದ್ದಾರಿ ಅಧಿಕಾರಿಗಳಿಂದ ವಿವರಣೆ ಪಡೆದು ಅತ್ಯವಶ್ಯಕ ಗಂಡಾಂತರ ಬಗ್ಗೆ ಪರಾಮರ್ಶೆ ಮಾಡುವುದು ಅತ್ಯವಶ್ಯ. ಜಿಲ್ಲಾಧಿಕಾರಿಗಳು ಸೇರಿದಂತೆ ಯಾವುದೇ ಅಧಿಕಾರಿಗಳು ಇಂತಹ ಗಂಭೀರ ಸಮಸ್ಯೆಯತ್ತ ಗಮನ ಹರಿಸದಿರುವುದು ನಾಗರಿಕರಿಗೆ ನೋವುಂಟು ಮಾಡಿದೆ ಎಂದು ಅವರು ವಿಷಾದಿಸಿದರು.
ಇನ್ನಾದರೂ ಶೀಘ್ರ ಎಚ್ಚೆತ್ತುಕೊಂಡು ಬಿರುಕು ಮುಚ್ಚಲು ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಲು ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸುವಂತೆ ಅವರು ಮನವಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.