ಪಾಲ್ತಾಡಿ : ಸೊಳ್ಳೆಗಳ ನಿರ್ಮೂಲನೆ ಹಾಗೂ ಪರಿಸರ ಸ್ವಚ್ಚತೆಯೊಂದೇ ರೋಗ ಹರಡದಂತೆ ತಡೆಗಟ್ಟಬಹುದಾದ ಮಾರ್ಗೋಪಾಯ. ಯಾವುದೇ ರೋಗ ಬಂದರೆ ಅಸಡ್ಡೆ ಬೇಡ ಕೂಡಲೇ ವೈದ್ಯರನ್ನು ಬೇಟಿಯಾಗುವುದು ಉತ್ತಮ ಎಂದು ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿ ಯಶೋದಾ ಹೇಳಿದರು.
ಅವರು ಶುಕ್ರವಾರ ಪಾಲ್ತಾಡು ಶ್ರೀವಿಷ್ಣುಮಿತ್ರವೃಂದ ಹಾಗೂ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಸ್ವಸ್ಥ ಸಮಾಜಕ್ಕಾಗಿ ನಮ್ಮ ನಡೆ ಕಾರ್ಯಕ್ರಮದಂಗವಾಗಿ ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ಸಂಸ್ಥೆಯ ಆರೋಗ್ಯ ಹಾಗೂ ಇಕೋಕ್ಲಬ್ ನ ಸಹಯೋಗದಲ್ಲಿ ನಡೆದ ಆರೋಗ್ಯ ಮಾಹಿತಿ ಕಾರ್ಯಗಾರದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುತ್ತಿರುವ ರೋಗಗಳಾದ ಮಲೇರಿಯಾ, ಡೆಂಗ್ಯೂ, ಫೈಲೇರಿಯಾ, ಚಿಕುನ್ ಗುನ್ಯ ಇದರ ಲಕ್ಷಣಗಳು, ಬರದಂತೆ ತಡೆಯೊಡ್ಡುವ ಮಾರ್ಗೋಪಾಯಗಳ ಕುರಿತಾಗಿ ಸವಿವರವಾಗಿ ಕಾಂiiಗಾರದಲ್ಲಿ ಮಾಹಿತಿ ನೀಡಿದರು.
ಶಾಲಾ ಪ್ರಭಾರ ಮುಖ್ಯಗುರು ಧರ್ಮಪಾಲ ಕೆ.ಕೆ ಮಾತನಾಡಿ, ಜನಜಾಗೃತಿಯಿಂದ ಮಾತ್ರ ಯಾವುದೇ ಕಾರ್ಯವನ್ನು ಯಶಶ್ವಿಯಾಗಿ ನಡೆಸಲು ಸಾಧ್ಯ,ಜನತೆ ಜಾಗೃತರಾಗದಿದ್ದಲ್ಲಿ ಯಾವುದೇ ಕೆಲಸ ಮಾಡಿದರೂ ಅದು ಯಶಸ್ವಿಯಾಗಿ ನಡೆಯಲು ಅಸಾಧ್ಯ.ಆರೋಗ್ಯದ ಕುರಿತು ಜನರಿಗೆ ಜಾಗೃತಿ ಉಂಟು ಮಾಡುವ ಕಾರ್ಯಗಳು ಹೆಚ್ಚು ನಡೆಯಬೇಕು ಎಂದರು.
ವೇದಿಕೆಯಲ್ಲಿ ಪ್ರೌಢಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ಸೈಯ್ಯದ್ ಗಫೂರ್ ಸಾಹೇಬ್, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಚೈತ್ರಾ,ಆಶಾ ಕಾರ್ಯಕರ್ತೆ ಬೇಬಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕರಾದ ಮಿತ್ರವೃಂದದ ಪ್ರವೀಣ್ ಕುಮಾರ್ ಸ್ವಾಗತಿಸಿ,ಮನೀಶ್ ಕುಮಾರ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.