News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ಕೇರಳ: ಮರಳಿ ಸನಾತನ ಧರ್ಮ ಸ್ವೀಕರಿಸಿದ 512 ಜನರು

ತಿರುವನಂತಪುರಂ: ಕೇರಳದ 512 ಜನರು ಸ್ವಯಂಪ್ರೇರಣೆಯಿಂದ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ. ಈ ಮೂಲಕ ತಮ್ಮ ಸನಾತನ ಬೇರುಗಳಿಗೆ ಘರ್‌ ವಾಪ್ಸಿ ಆಗಿದ್ದಾರೆ. ಇದೊಂದು ಸಾಂಪ್ರದಾಯಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಮರು ಅಪ್ಪಿಕೊಳ್ಳುವಿಕೆ ಎಂದು ಹೇಳಲಾಗಿದೆ.

ಹಿಂದೂ ಸೇವಾ ಕೇಂದ್ರ ಮತ್ತು ಆದಿವಾಸಿ ಸಂರಕ್ಷಣಾ ಸಮಿತಿಯ ಪ್ರಯತ್ನಗಳ ಮೂಲಕ ಈ ಬೆಳವಣಿಗೆ ನಡೆದಿದ್ದು,   ತಮ್ಮ ಪೂರ್ವಜರ ಸಂಪ್ರದಾಯಗಳು ಮತ್ತು ಸನಾತನ ಪರಂಪರೆಯೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಸ್ವಯಂಪ್ರೇರಿತವಾಗಿ 512 ಜನ  ನಿರ್ಧಾರ ತೆಗೆದುಕೊಂಡಿದ್ದಾರೆ ಸಂಸ್ಥೆಗಳು ತಿಳಿಸಿವೆ.

ಘರ್ ವಾಪಸಿಯನ್ನು 512 ವ್ಯಕ್ತಿಗಳು ತಮ್ಮ ಆಳವಾದ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ.

ಸಂಘಟಕರ ಪ್ರಕಾರ,  512 ಮಂದಿಯೂ ಯಾವುದೇ ಬಲವಂತ, ಪ್ರಚೋದನೆ ಅಥವಾ ಆಮಿಷವಿಲ್ಲದೆ ನಿರ್ಧಾರ ತೆಗೆದುಕೊಂಡಿದ್ದಾರೆ, ತಮ್ಮದೇ ಆದ ದೃಢನಿಶ್ಚಯದಿಂದ ಸನಾತನ ಧರ್ಮಕ್ಕೆ ಮರಳಲು ಆಯ್ಕೆ ಮಾಡಿಕೊಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top