ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿದ್ಯಾರ್ಥಿನಿ, ಎಬಿವಿಪಿಯ ಕು. ಚೈತ್ರಾ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಾಕಾರಿಯಾಗಿ ಬರೆದ ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೇಸು ದಾಖಲಾಗಿದೆ.
ಮಂಗಳೂರು ಮುಸ್ಲಿಂ ಕುಡ್ಲ ಎನ್ನುವ ಫೇಸ್ಬುಕ್ನಲ್ಲಿ ‘ ಅನಾಮಧೇಯ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್ನ್ನು ನೋಡಿ ಅದರಿಂದ ಬೇಸತ್ತು ಕು. ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಬರೆಯಲಾಗಿತ್ತು. ಈ ರೀತಿಯಾಗಿ ವಿದ್ಯಾರ್ಥಿನಿಯ ಬಗ್ಗೆ ಅವಹೇಳನಾಕಾರಿಯಾಗಿ ಮತ್ತು ಅಸಭ್ಯವಾಗಿ ಬರೆದಿರುವವರ ವಿರುದ್ದ ಹಾಗೂ ಮಂಗಳೂರು ಮುಸ್ಲಿಂ ಕುಡ್ಲದ ವಿರುದ್ದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.
ಇತ್ತೀಚೆಗೆ ಮಹಿಳೆಯರ ವಿರುದ್ದ ದೌರ್ಜನ್ಯಗಳು ಹೆಚ್ಚುತ್ತಿದ್ದು ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿನಿಯರ ವಿರುದ್ದ ಅಪಮಾನಕಾರಿಯಾಗಿ ಬರೆದು ವಿದ್ಯಾರ್ಥಿನಿಯರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡುತ್ತಿದೆ. ಈ ರೀತಿಯ ಪ್ರಕರಣಗಳಿಂದ ಅನೇಕ ವಿದ್ಯಾರ್ಥಿನಿಯರ ಪ್ರಾಣ ಹಾನಿಯಾದ ಘಟನೆಗಳೂ ನಮ್ಮ ಮುಂದಿದೆ.
ಕೆಲವು ತಿಂಗಳುಗಳ ಹಿಂದೆ ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ನಕಲಿ ಫೇಸ್ ಬುಕ್ ಅಕೌಂಟ್ನನ್ನು ರಚಿಸಿ ಅದರಲ್ಲಿ ವಿದ್ಯಾರ್ಥಿನಿಯರ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿತ್ತು, ಎಬಿವಿಪಿ ಆ ಸಂದರ್ಭದಲ್ಲಿ ಬೃಹತ್ ಹೋರಾಟ ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು, ಆದರೆ ಅವರ ವಿರುದ್ದ ಕ್ರಮಕೈಗೊಳ್ಳದೆ ಇರುವುದರ ಪರಿಣಾಮ ಈ ರೀತಿಯ ಘಟನೆಗಳು ಮರುಕಳಿಸಿದೆ. ಹಾಗಾಗಿ ಪೊಲೀಸರು ಈ ಪ್ರಕರಣದ ಹಿಂದಿರುವ ವ್ಯಕ್ತಿಯನ್ನು ಬಂಧಿಸಿ ಶಿಕ್ಷಗೆ ಒಳಪಡಿಸಬೇಕೆಂದು ಎಬಿವಿಪಿ ಆಗ್ರಹಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.