ಬೆಳ್ತಂಗಡಿ : ಸಂಗೀತ ಆರಾಧನೆಯಿಂದ ಬಾಲ ಪ್ರತಿಭೆ, ಕಲೆ, ಸಂಸ್ಕೃತಿ ಬೆಳಗಲಿ, ಪಡ್ವೆಟ್ನಾಯ ಉಜಿರೆ, ಮನುಷ್ಯನ ಆಸಕ್ತಿಗಳು ಹತ್ತು ಹಲವು, ಅವುಗಳನ್ನು ವ್ಯಕ್ತ ಪಡಿಸುವ ಮಾಧ್ಯಮವೂ ಹಲವು ಸಂಗೀತ, ನೃತ್ಯಗಳ ಮೂಲಕ ಸಮಾಜದಲ್ಲಿ ಸಂಸ್ಕೃತಿಯನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಅನೇಕ ಸಂಗೀತೋತ್ಸವಗಳು ನಡೆದಿದ್ದರೂ ಮಕ್ಕಳ ಮೂಲಕ ಸಂಗೀತ ಅರ್ಪಣೆ ನಡೆಯುತ್ತಿರುವುದು ಪ್ರಥಮ ಪ್ರಯತ್ನ.ಇದರಿಂದ ಮಕ್ಕಳ ಮೂಲಕ ಸಂಗೀತ ಹೊರಹೊಮ್ಮುವುದಲ್ಲಿದೆ. ಅವರಲ್ಲಿ ಭಯ ನಿವಾರಣೆಯಾಗಿ ಆತ್ಮಸ್ಥೈರ್ಯ ಬೆಳೆಯುವುದು.ಶಾಸ್ತ್ರೀಯ ಸಂಗೀತಆರಾಧನೋತ್ಸವದಿಂದ ಸಂಗೀತ ಪ್ರತಿಭೆಗಳು ಹೊರಹೊಮ್ಮುವ ಮೂಲಕ ನಮ್ಮ ಕಲೆ, ಸಂಸ್ಕೃತಿ ಬೆಳಗಲೆಂದು ಉಜಿರೆ ಶ್ರೀ ಜನಾರ್ದನದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನುಡಿದರು.
ಅವರು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ) ನೇತೃತ್ವದಲ್ಲಿ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ನಡೆದ ದ್ವಿದಿನ ಶಾಸ್ತ್ರೀಯ ಸಂಗೀತಆರಾಧನಾಉತ್ಸವ ಮತ್ತುಯಕ್ಷೋಪಾಸನೆ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸಿ ಮಾತನಾಡುತ್ತಿದ್ದರು.ಗೋಪಾಲ ರಾವ್, ಸುರೇಶ್ ಕುದ್ರೆಂತಾಯ, ವಿದುಷಿ ಶ್ಯಾಮಲಾ ನಾಗರಾಜ್, ವಿದುಷಿ ಕೆ.ಆರ್.ಶಾಂತಾ, ನಾಗರತ್ನ ಕಲ್ಯಾಣಿತ್ತಾಯ, ನರೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಸ್ವಾಗತಿಸಿ ಪ್ರಸ್ಥಾಪಿಸಿದರು.
ಎರಡು ದಿನಗಳ ಕಾಲ ನಡೆದ ಸಂಗೀತಆರಾಧನೋತ್ಸವದಲ್ಲಿ ಸಪ್ತಸ್ವರ ವಿದ್ಯಾಲಯದ ವಿದುಷಿ ಕೆ.ಆರ್.ಶಾಂತಾ ಶಿಷ್ಯವೃಂದ, ಪುಷ್ಪಕುಮಾರಿ ಮತ್ತು ಬಳಗ, ಕವಿತಾಕೊರ್ನಾಯ ಮತ್ತು ಬಳಗ, ಶಿವಪ್ರಸಾದ್ ಐತಾಳ್ ಪಂಜರ್ಪು ಮತ್ತು ಬಳಗ, ಶೃತಿ ಕ್ಲಾಸಿಕಲ್ಸ್ ನ ಉಪ್ಪಿನಂಗಡಿ – ಮಡಂತ್ಯಾರು – ಉಜಿರೆ – ಗುರುವಾಯನಕೆರೆ ಕೇಂದ್ರದ ವಿದುಷಿ ಶ್ಯಾಮಲಾ ನಾಗರಾಜ್ ಮತ್ತು ಶಿಷ್ಯವೃಂದ, ವತ್ಸಲಾ ಆರ್.ಬಡೆಕಿಲ್ಲಾಯ ಮತ್ತು ಬಳಗ, ತೇಜಸ್ವಿನಿ ಮತ್ತು ರಂಜಿತಾ, ಗಾನಭಾರತಿ ಸಮಗೀತ ಶಾಲೆಯ ಸುವರ್ಣ ಕುಮಾರಿ ಮತ್ತು ಶಿಷ್ಯವೃಂದ, ಎಲ್ಲೂರು ಸಹೋದರಿಯ ರಿಂದ ರಂಜಿತಾ ಮತ್ತು ರಕ್ಷಿತಾ, ವಿದುಷಿ ಅನುರಾಥ ರವಿಶಂಕರ್, ಉಜಿರೆಯ ಕೃಷ್ಣಗಾನಸುಧಾದ ವಿದುಷಿ ಅನಸುಯ ದೇವಸ್ಥಳಿ, ಶಿಷ್ಯವೃಂದ ಮತ್ತು ಪುತ್ತೂರಿನ ಶ್ರೇಯಾ ಕೊಳತ್ತಾಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಯಕ್ಷೆಪಾಸನೆಯಾಗಿ, ಪುತ್ತಿಗೆ ರಘುರಾಮ ಹೊಳ್ಳರ ಹಾಡುಗಾರಿಕೆ, ಕೃಷ್ಣಪ್ರಸಾದ್ ಉಳಿತ್ತಾಯ (ಮದ್ದಳೆ), ಅಡೂರು ಗಣೇಶರಾವ್ (ಚೆಂಡೆ) ಸಹಕಾರದಲ್ಲಿ ಗೋವಿಂದ ಭಟ್ ಮತ್ತು ರಂಜಿತಾ ಎಲ್ಲೂರು ಅವರ ಯುಗಳ ಯಕ್ಷನೃತ್ಯ ಮತ್ತು ವರಹಾವತಾರದ ಯಕ್ಷನೃತ್ಯ ಪ್ರದರ್ಶನ ಎಲ್ಲರ ಮನಸೂರೆಗೊಂಡಿತು. ಪ್ರಥಮ ಪ್ರಯೋಗದಲ್ಲಿ ಕಲಾಭಿಮಾನಿಗಳ ಪ್ರೋತ್ಸಾಹದಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುಡಿಬಂದಿರುವುದು ವ್ಯಕ್ತವಾಯಿತು. ಯುವ ಸಂಗೀತಾಭ್ಯಾಸಿಗಳಿಗೆ ವೇದಿಕೆ ಕಲ್ಪಿಸಿಕೊಟ್ಟ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ವಿಶೇಷವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.