ಬಂಟ್ವಾಳ: ಸರ್ಕಾರವು ಕಾರ್ಮಿಕ ಮತ್ತು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಹಿಂದೆ ಭವಿಷ್ಯನಿಧಿ ಮೂಲಕ ಹಿರಿಯ ಬೀಡಿ ಕಾರ್ಮಿಕರಿಗೆ ಸಿಗುತ್ತಿದ್ದ ರೂ 1ಸಾವಿರ ಮೊತ್ತದ ಪಿಂಚಣಿಯನ್ನೂ ಕಸಿದುಕೊಳ್ಳುವ ಮೂಲಕ ಬಂಡವಾಳಶಾಹಿದಾರರನ್ನು ರಕ್ಷಿಸುತ್ತಿದೆ ಎಂದು ಜಿಲ್ಲಾ ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ) ಅಧ್ಯಕ್ಷ ಪಿ.ಸಂಜೀವ ಆರೋಪಿಸಿದ್ದಾರೆ.
ತಾಲ್ಲೂಕಿನ ಬೀಡಿ ಎಂಡ್ ಜನರಲ್ ಲೇಬರ್ ಯೂನಿಯನ್ ವತಿಯಿಂದ ಬಂಟ್ವಾಳದಲ್ಲಿ ನಡೆದ ೬೬ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ವೇಳೆ ಹಿರಿಯ ಕಾರ್ಮಿಕ ಮುಖಂಡ ಡಿ.ಹೆನ್ರಿ ಲೋಬೋ ಇವರನ್ನು ಸನ್ಮಾನಿಸಲಾಯಿತು. ಎಐಟಿಯುಸಿ ಕಾರ್ಯದರ್ಶಿ ಸುರೇಶ್ ಕುಮಾರ್ ೮ ನಿರ್ಣಯಗಳನ್ನು ಮಂಡಿಸಿದರು. ಸಿಪಿಐ ಕಾರ್ಯದರ್ಶಿ ಬಿ.ಶೇಖರ್ ಕಳೆದ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರೇಮನಾಥ ಕೆ. ಇವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.ಹಿರಿಯ ಕಾರ್ಮಿಕ ಮುಂದಾಳು ಬಿ.ವಿಶ್ವನಾಥ ನಾಯಕ್, ಕೆಎಸ್ಆರ್ಟಿಸಿ ನೌಕರರ ಸಂಘದ ಕಾರ್ಯದರ್ಶಿ ಪ್ರವೀಣ್ ಕೆ. ಮತ್ತಿತರರು ಮಾತನಾಡಿದರು.
ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್ ಉಪಾಧ್ಯಕ್ಷ ಎಂ.ಶಿವಪ್ಪ ಕೋಟ್ಯಾನ್, ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಸರಸ್ವತಿ ಕಡೇಶಿವಾಲಯ, ನರಿಕೊಂಬು ಗ್ರಾ.ಪಂ. ಸದಸ್ಯೆ ಬೇಬಿ ಸಂಜೀವ, ಅಮ್ಟಾಡಿ ಗ್ರಾ.ಪಂ.ಸದಸ್ಯೆ ಚಂದ್ರಾವತಿ, ನಾವೂರು ಗ್ರಾ.ಪಂ. ಸದಸ್ಯೆ ಗಿರಿಜಾ, ಚಂದಪ್ಪ ನಾವೂರು ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಬಿ.ಶೇಖರ್ ಸ್ವಾಗತಿಸಿ, ಸಹಕಾರ್ಯದರ್ಶಿ ಗೀತಾ ವಂದಿಸಿದರು. ಕೋಶಾಧಿಕಾರಿ ಪ್ರೇಮನಾಥ ಕೆ. ಕಾರ್ಯಕ್ರಮ ನಿರೂಪಿಸಿದರು.
ಪದಾಧಿಕಾರಿಗಳ ಆಯ್ಕೆ :ನೂತನ ಅಧ್ಯಕ್ಷರಾಗಿ ಬಿ.ಬಾಬು ಭಂಡಾರಿ, ಉಪಾಧ್ಯಕ್ಷರಾಗಿ ರತಿ.ಎಸ್.ಭಂಡಾರಿ, ಕೆ. ಜಯಂತ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಶೇಖರ್, ಸಹಕಾರ್ಯದರ್ಶಿಯಾಗಿ ಗೀತಾ, ಚಂದಪ್ಪ ನಾವೂರು, ಸರೋಜಿನಿ ನೋರ್ನಡ್ಕ, ಕೋಶಾಧಿಕಾರಿಯಾಗಿ ಪ್ರೇಮನಾಥ ಕೆ. ಆಯ್ಕೆಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.