ಬೆಳ್ತಂಗಡಿ : ಎತ್ತಿನಹೊಳೆ ಎಂಬ ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ಗುರುವಾರ ವಿವಿಧ ಸಂಘಟನೆಗಳು ಕರೆ ನೀಡಿದ ದ.ಕ. ಜಿಲ್ಲಾ ಬಂದ್ಗೆ ಬೆಳ್ತಂಗಡಿ ತಾಲೂಕಿನ 81 ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು, ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿದರೆ ಬಂದ್ಅತ್ಯಂತ ಶಾಂತಿಯುತವಾಗಿ ನಡೆದಿದೆ.
ಗುರುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಲಾಯಿಲಾ ಕಾಶಿಬೆಟ್ಟು ಬಳಿಯಾರೋ ಕಿಡಿಕೇಡಿಗಳು ಕಾರೊಂದಕ್ಕೆ ಬೆಂಕಿ ಹಚ್ಚಿದರು. ಕೂಡಲೇ ಅಗ್ನಿಶಾಮಕದಳದವರು ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಉಜಿರೆ, ಬೆಳ್ತಂಗಡಿ ಸಂತೆಕಟ್ಟೆ, ಕನ್ಯಾಡಿ, ಗುರುವಾಯನಕೆರೆ ಮುಂತಾದೆಡೆ ಟಯರ್ಗೆ ಬೆಂಕಿಹಚ್ಚಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಬಸ್ಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿ ರಸ್ತೆಗೆ ಇಳಿಯಲಿಲ್ಲ. ಸರ್ಕಾರಿ ಬಸ್ಗಳು ಬೆಳಗ್ಗೆ ಸಂಚಾರವನ್ನು ಆರಂಭಿಸಿದರೂ ವಿವಿದೆಡೆಗಳಲ್ಲಿ ವಾಹನಗಳನ್ನು ತಡೆದ ಹಿನ್ನಲೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳ ಹಾಗೂ ಮಂಗಳೂರಿಗೆ ಬರುತ್ತಿದ್ದ ವಾಹನಗಳನ್ನು ಕೊಟ್ಟಿಗೆಹಾರ ಹಾಗೂ ಸಕಲೇಶಪುರದಲ್ಲಿ ನಿಲ್ಲಿಸಲಾಗಿತ್ತು. ತಾಲೂಕಿನಾದ್ಯಂತ ಬಹುತೇಕ ಅಂಗಡಿ-ಮುಂಗಟ್ಟುಗಳು ಬೆಳಗ್ಗಿನಿಂದಲೇ ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿದ್ದವು. ಕೆಲವೆಡೆ ಅಂಗಡಿಗಳು ಅಂಗಡಿಗಳು ಬಾಗಿಲು ತೆರೆದಿದ್ದರೂ ಬಂದ್ ಬೆಂಬಲಿಗರ ಮನವಿಯ ಮೇರೆಗೆ ಬಾಗಿಲು ಮುಚ್ಚಿದವು.
ತಾಲೂಕಿನ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಗುರುವಾಯನಕೆರೆ, ಮಡಂತ್ಯಾರು, ಗೇರುಕಟ್ಟೆ,, ವೇಣೂರು, ಅಳದಂಗಡಿ, ನಾರಾವಿ, ಮುಂಡಾಜೆ ಸೇರಿದಂತೆ ಬಹುತೇಕ ನಗರಗಳಲ್ಲಿ ಸಂಪೂರ್ಣ ಬಂದ್ಗೆ ಬೆಂಬಲ ವ್ಯಕ್ತವಾಗಿತ್ತು. ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.
ತಾಲೂಕು ಕೇಂದ್ರ ಬೆಳ್ತಂಗಡಿಯಲ್ಲಿ ಬಂದ್ ಬೆಂಬಲಿಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಪೋಲಿಸರು ಬಂಧಿಸಿ, ಬಿಡುಗಡೆಗೊಳಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ನೇತ್ರಾವತಿ ಹೋರಾಟ ಸಮಿತಿ ಸಂಚಾಲಕ ಪುಷ್ಪರಾಜ್ ಶೆಟ್ಟಿಅವರು, ನಮ್ಮ ಜೀವನಾಡಿಯಾದ ನೇತ್ರಾವತಿ ಉಳಿಸುವಿಕೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಇದಕ್ಕೆ ಯಾವುದೇ ರೀತಿಯ ತಡೆವೊಡ್ಡಿರೂ ಅದನ್ನು ಸಹಿಸಲಾರೆವು. ನಾವಿಂದು ತಾಲೂಕಿನಲ್ಲಿ ನೇತ್ರಾವತಿ ಉಳಿವಿಕೆಗಾಗಿ ಎರಡನೇ ಬಾರಿಗೆ ಶಾಂತಿಯುತ ಬಂದ್ಗೆ ಕರೆ ನೀಡಿದ್ದು ತಾಲೂಕಿನ ಜನತೆ ಜಾತಿಮತ ಬೇದವಿಲ್ಲದೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇದು ಸರಕಾರಕ್ಕೆ ಶಾಂತಿಯುತ ಹೋರಾಟದ ಎಚ್ಚರಿಕೆ. ಮುಂದೆ ನೇತ್ರಾವತಿ ತಿರುವು ಯೋಜನೆಯ ಬಗ್ಗೆ ನೈಜ ಅಧ್ಯಯನ ನಡೆಸಲಿ. ಇದರ ಸಾಧಕ ಬಾದಕಗಳ ಬಗ್ಗೆ ತಾಲೂಕಿನ ಜನತೆಯ ಮುಂದೆ ಸರಕಾರವಾಗಲೀ ಅಥವಾ ಅಧಿಕಾರಿಗಳಾಗಲೀ ಮಂಡಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಕೋಶಾಧಿಕಾರಿ ಹರೀಶ್ ಪೂಂಜ, ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಅಧ್ಯಕ್ಷ ಅಕ್ಬರ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ನ್ಯಾಯವಾದಿ ಶಶಿಕಿರಣ್ ಜೈನ್, ಬಾಲಕೃಷ್ಣ ಸವಣಾಲು, ಅಭಿನಂದನ್ ಹರೀಶ್ಕುಮಾರ್, ಶೈಲೇಶ್ಆರ್.ಜೆ., ಭಾಸ್ಕರ ಧರ್ಮಸ್ಥಳ. ಪ್ರಸಾದ್ ಶೆಟ್ಟಿ ಎಣಿಂಜೆ, ಜನಾರ್ದನ ಬಂಗೇರ ಮೂಡಾಯಿಗುತ್ತು, ದಿನೇಶ್ ಮುಗುಳಿ, ಭರತ್ಕುಮಾರ್ ಇಂದಬೆಟ್ಟು, ಅರಿಹಂತ್ ಜೈನ್, ನಾಗೇಶ್ ಪೈ, ಜನಾರ್ದನ ಸುದೆಮುಗೇರು, ಹರೀಶ್ ಜಿ.ವಿ.ಸವಣಾಲು, ರಾಜೇಶ್ ಶೆಟ್ಟಿ ಲಾಯಿಲಾ, ವಕೀಲರಾದ ದಿನೇಶ್, ಪ್ರಶಾಂತ್, ಪ್ರಕಾಶ್ ಕಾಶಿಬೆಟ್ಟು, ಉಮೇಶ್ ಕುಲಾಲ್, ಪ್ರಕಾಶ್ ಆಚಾರ್ಯ, ದಿನೇಶ್ರೆಂಕೆದಗುತ್ತು, ರಶೀದ್ ಸಂಜಯನಗರ, ಹಾಗೂ ನೂರಾರು ಹೋರಾಟಗಾರರ ಭಾಗವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.