ಬೆಳ್ತಂಗಡಿ : ಎಂಆರ್ಪಿಐಲ್ ಕಂಪೆನಿಯು ತನ್ನ 4ನೇ ಹಂತದ ವಿಸ್ತರಣಾ ಯೋಜನೆಗಾಗಿ 1050 ಎಕ್ರೆ ಕೃಷಿಭೂಮಿ ಸ್ವಾಧೀನಪಡಿಸಲು ಮುಂದಾಗಿರುವುದನ್ನು ಕೂಡಲೇ ಕೈಬಿಡಬೇಕು. ಕೃಷಿಭೂಮಿ ಸಂರಕ್ಷಣಾ ಸಮಿತಿಯು ಪೆರ್ಮುದೆ, ಕುತ್ತೆತ್ತೂರು, ತೆಂಕಎಕ್ಕಾರು, ದೇಲಂತ ಬೆಟ್ಟು ಗ್ರಾಮಗಳ ಪ್ರತಿ ಮನೆಗೂ ತೆರಳಿ ಅಭಿಪ್ರಾಯ ಪಡೆದಿದ್ದು 85% ಮಂದಿ ಭೂಮಿ ಬಿಡಲು ತಯಾರಿಲ್ಲ ಎಂದು ಲಿಖಿತವಾಗಿ ಹೇಳಿದ್ದಾರೆ.
ಭೂಸ್ವಾಧೀನ ಮಾಡಿದರೆ ಸ್ಥಳೀಯರು ಉಗ್ರ ಹೋರಾಟ ಮಾಡುವುದು ನಿಶ್ಚಿತ. ಇದಕ್ಕೆ ನಾಗರಿಕ ಸೇವಾ ಟ್ರಸ್ಟ್ ಮತ್ತುಟ್ರಸ್ಟ್ನ ಸಹಸಂಘಟನೆಗಳಾದ ದ.ಕ. ಪರಿಸರಾಸಕ್ತರ ಒಕ್ಕೂಟ, ಕರಾವಳಿ ಮಹಿಳಾ ಜಾಗೃತಿ ವೇದಿಕೆ, ಕೃಷಿಕರ ವೇದಿಕೆ ಕರ್ನಾಟಕ ,ದಲಿತ ಅಭಿವೃದ್ಧಿ ಸಮಿತಿ ಪೂರ್ಣ ಬೆಂಬಲ ನೀಡುತ್ತೇವೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ದ.ಕ. ಜಿಲ್ಲೆಯ ಪರಿಸರಧಾರಣಾ ಸಾಮರ್ಥ್ಯ ಅಧ್ಯಯನ ಪೂರ್ಣಗೊಳಿಸದೆ ಯಾವುದೇ ಮಾಲಿನ್ಯಕಾರಕ ಮತ್ತು ಬೃಹತ್ ಕೈಗಾರಿಕೆಗಳಿಗೆ ಅವಕಾಶ ನೀಡಬಾರದೆಂದು ಪದೇ ಪದೇ ಒತ್ತಾಯಿಸುತ್ತಿದ್ದರೂ ಈ ಅಧ್ಯಯನವನ್ನು ಅರ್ಧದಲ್ಲಿ ಕೈಬಿಟ್ಟು ಕೈಗಾರಿಕೆಗಳ ಕೈಗೊಂಬೆಯಾಗಿ ಸರಕಾರ ವರ್ತಿಸುತ್ತಿದೆ. ಹಿಂದಿನ ಮತ್ತು ಈಗಿನ ಪರಿಸರ ಮಂತ್ರಿಗಳು ನಮ್ಮ ಜಿಲ್ಲೆಯವರೇ ಆದರೂ ಡಾ| ಮಾಧವ ಗಾಡ್ಗಿಳ್ ನೇತೃತ್ವದ ಧಾರಣಾ ಸಾಮರ್ಥ್ಯ ಅಧ್ಯಯನ ಸಮಿತಿಯಿಂದ ಅಧ್ಯಯನ ಯಾಕೆ ಮುಂದುವರಿಸುತ್ತಿಲ್ಲ ಎಂದು ಬಹಿರಂಗ ಸ್ಪಷ್ಟನೆ ಕೊಡಬೇಕು ಎಂದು ಟ್ರಸ್ಟ್ ಆಗ್ರಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.