ನವದೆಹಲಿ: ದೇಶದಾದ್ಯಂತ 112ಕ್ಕೂ ಅಧಿಕ ಗ್ರಾಮಗಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ವಿದ್ಯುದೀಕರಿಸಿದ ಒಟ್ಟು ಗ್ರಾಮಗಳ ಸಂಖ್ಯೆ 7,766ಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೀನ್ದಯಾಳ್ ಉಪಾಧ್ಯಾಯ್ ಗ್ರಾಮ ಜ್ಯೋತಿ ಯೋಜನೆ ಅಡಿಯಲ್ಲಿ ಮೇ 9ರಿಂದ 15ರ ವರೆಗೆ ಅರುಣಾಚಲ ಪ್ರದೇಶದ 2 ಗ್ರಾಮಗಳು, ಅಸ್ಸಾಂನ 42, ಜಾರ್ಖಂಡ್ನ 24, ಮಧ್ಯಪ್ರದೇಶದ 16, ಬಿಹಾರದ ಛತ್ತೀಗಢದ 6, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ 3, ಉತ್ತರ ಪ್ರದೇಶ ಹಾಗೂ ಒಡಿಶಾದ 2 ಸೇರಿದಂತೆ 122 ಗ್ರಾಮಗಳನ್ನು ವಿದ್ಯೂದಿಕರಿಸಲಾಗಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.
ದೇಶದಾದ್ಯಂತ ಒಟ್ಟು 18,452 ಗ್ರಾಮಗಳನ್ನು ಮೇ 1, 2018ರ ಒಳಗಾಗಿ ವಿದ್ಯುದೀಕರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.