ನವದೆಹಲಿ: ಕೇರಳ ವಿಧಾನಸಭಾ ಚುನಾವಣೆ ಮುಂದಿನ ಸೋಮವಾರ ನಡೆಯಲಿದೆ. ಒಟ್ಟು 1,125 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ ಬರೋಬ್ಬರಿ 311 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣವಿದೆ.
1,125 ಅಭ್ಯರ್ಥಿಗಳ ಪೈಕಿ 202 ಜನ ಕೋಟ್ಯಾಧಿಪತಿಗಳು. ಇವರ ಆಸ್ತಿ ಮೌಲ್ಯ 1.28 ಕೋಟಿಗಿಂತಲೂ ಅಧಿಕವಾಗಿದೆ. 496 ಮಂದಿ ಅಭ್ಯರ್ಥಿಗಳು ತಮ್ಮ ಪಾನ್ ವಿವರಗಳನ್ನು ಇನ್ನೂ ಸಲ್ಲಿಕೆ ಮಾಡಿಲ್ಲ. 834 ಮಂದಿ ಆದಾಯ ತೆರಿಗೆಯ ವಿವರಗಳನ್ನು ಘೋಷಿಸಿಲ್ಲ.
ಸಾವಿರಕ್ಕೂ ಮೇಲ್ಪಟ್ಟ ಅಭ್ಯರ್ಥಿಗಳ ಪೈಕಿ ಕೇವಲ 104ಮಂದಿ ಮಾತ್ರ ಮಹಿಳೆಯರಿದ್ದಾರೆ.
669ಅಭ್ಯರ್ಥಿಗಳ ಶಿಕ್ಷಣ 5ನೇ ತರಗತಿಯಿಂದ 12ನೇ ತರಗತಿ. 29ಮಂದಿ ಕೇವಲ ಅಕ್ಷರಸ್ಥರು. 7 ಮಂದಿ ಅನಕ್ಷರಸ್ಥರು. 380 ಮಂದಿ ಪದವೀಧರರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.