ನವದೆಹಲಿ: ಪಶ್ಚಿಮ ನೌಕಾ ಕಮಾಂಡ್ನ ಪ್ರಧಾನ ಧ್ವಜ ಅಧಿಕಾರಿ ಮುಖ್ಯಸ್ಥರಾಗಿರುವ ಸುನಿಲ್ ಲಾಂಬಾ ಅವರನ್ನು ನೌಕಾ ಸೇನೆಯ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದ್ದು, ಅವರು ಮೇ 31 ರಂದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಅಡ್ಮಿರಲ್ ಆರ್.ಕೆ. ಧವನ್ ನಿವೃತ್ತರಾಗಿದ್ದು, ನೌಕಾ ಸಂಚರಣೆ ಮತ್ತು ನಿರ್ದೇಶನ ತಜ್ಞರಾಗಿರುವ ಸುನಿಲ್ ಲಾಂಬಾ ಮುಂದಿನ ಮೂರು ವರ್ಷಗಳ ಕಾಲ ಅಧಿಕಾರ ವಹಿಸಲಿದ್ದಾರೆ.
ಮೂರ ದಶಕಗಳಿಂದ ಭಾರತೀಯ ನೌಕೆಯಲ್ಲಿ ಕಾರ್ಯ ನಿರ್ವಹಿಸಿರುವ ಸುನಿಲ್ ಲಾಂಬಾ ಅವರು ಕಾರ್ವೆಟ್ ಯುದ್ಧನೌಕೆ ಐಎನ್ಎಸ್ ಸಿಂಧುದುರ್ಗ್ ಹಾಗೂ ಯುದ್ಧನಾಕೆ ಐಎನ್ಎಸ್ ದುನಗಿರಿಯ ಸಂಚರಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಲಾಂಬಾ ಅವರು ನಾಲ್ಕು ಫ್ರಂಟ್ಲೈನ್ ಯುದ್ಧ ನೌಕೆಗಳಾದ ಐಎನ್ಎಸ್ ಕಾಕಿನಾಡ (ಸಿಡಿಗುಂಡು ನಿವಾರಕ), ಐಎನ್ಎಸ್ ಹಿಮಗಿರಿ (ಯುದ್ಧ ನೌಕೆ), ಐಎನ್ಎಸ್ ರಣವಿಜಯ ಹಾಗೂ ಐಎನ್ಎಸ್ ಮುಂಬಯಿ (ವಿಧ್ವಂಸಕ ನೌಕೆಗಳು)ಗಳನ್ನು ನಿರ್ದೇಶಿಸಿದ್ದಾರೆ.
ಸಿಕಂದರಾಬಾದ್ನ ಡಿಫೆನ್ಸ್ ಮ್ಯಾನೇಜ್ಮೆಂಟ್ ಕಾಲೇಜಿನ ಅಧ್ಯಾಪಕರಾಗಿಯೂ ಸುನಿಲ್ ಲಾಂಬಾ ಕಾರ್ಯ ನಿರ್ವಹಿಸಿದ್ದಾರೆ.
2019 ರ ಮೇ 31 ರವೆರೆಗೆ ಇವರು ಕಾರ್ಯ ನಿರ್ವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.