ಶಾರದಾ ದೇವರ್ ದೃಷ್ಟಿಯಿಲ್ಲದೆ ಹುಟ್ಟಿದವಳು, ಈಕೆಗೆ ಜಗತ್ತು ಹೇಗಿದೆ ಎಂಬುದನ್ನು ನೋಡುವ ಅದೃಷ್ಟವಿಲ್ಲ ಆದರೆ ಜೀವನದಲ್ಲಿ ಸಾಧಿಸಬೇಕು ಎಂಬ ಛಲವಿತ್ತು. ಅಂಗ ವೈಕಲ್ಯ ಆಕೆಗೆ ಸಾಧನೆಯ ಹಾದಿಗೆ ಎಂದೂ ತೊಡಕಾಗಲಿಲ್ಲ.
24 ವರ್ಷದ ಬುಡಕಟ್ಟು ಜನಾಂಗದ ಅತೀ ಹಿಂದುಳಿದ ಕುಟುಂಬದ ಹೆಣ್ಣುಮಗಳಾದ ಶಾರದಾ ಕಳೆದ ವಾರವಷ್ಟೇ ಬ್ಯಾಂಕ್ ಆಫ್ ಇಂಡಿಯಾದ ಪ್ರೊಬೆಷನರಿ ಆಫೀಸರ್ ಆಗಿ ನೇಮಕವಾಗಿದ್ದಾಳೆ.
ಮಧ್ಯಪ್ರದೇಶದ ಇಂಧೋರ್ನಿಂದ 170 ಕಿ.ಮೀ ದೂರದಲ್ಲಿರುವ ಜಬಟ್ ತೆಶಿಲ್ ಗ್ರಾಮ ಕೃಷಿ ಪ್ರಧಾನವಾದುದು, ಇಲ್ಲಿ ಹೆಚ್ಚಿನ ಶಿಕ್ಷಣವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ, ಅಂತಹುದರಲ್ಲಿ ದೃಷ್ಟಿಯಿಲ್ಲದ ಶಾರದಾ ತನ್ನ ಗುರಿಯನ್ನು ತಲುಪಿದ್ದಾಳೆ.
ತನ್ನ ಜಿಲ್ಲೆ ಅಲಿರಾಜ್ಪುರದ ಜಿಲ್ಲಾಧಿಕಾರಿ ಈಕೆಗೆ ಶಿಕ್ಷಣ ಪಡೆಯಲು ಸಹಾಯವಾಗಲಿ ಎಂದು 10 ಸಾವಿರ ರೂಪಾಯಿಯನ್ನು ಕೊಡುಗೆಯಾಗಿ ನೀಡಿದ್ದರು. ಆದರೆ ಶಾರದಾ ತನಗೆ ಉದ್ಯೋಗ ಸಿಕ್ಕದ ಕೂಡಲೇ ಈ ಹಣವನ್ನು ಅವರಿಗೆ ಹಿಂದಿರುಗಿಸಿದ್ದಾಳೆ. ನನ್ನಂತೆ ಇರುವ ಮತ್ತಷ್ಟು ಜನಕ್ಕೆ ಜಿಲ್ಲಾಧಿಕಾರಿಯವರು ಸಹಾಯ ಮಾಡಲಿ ಎಂಬ ಕಾರಣಕ್ಕೆ ಹಣವನ್ನು ಹಿಂದಿರುಗಿಸಿದ್ದೇನೆ ಎಂದು ವಿನಮ್ರವಾಗಿ ಆಕೆ ನುಡಿಯುತ್ತಾಳೆ.
3 ತಂಗಿಯರ, ಒಬ್ಬ ತಮ್ಮನ ಹಿರಿಯಕ್ಕ ಆಗಿರುವ ಶಾರದಾ ಈಗ ಇಡೀ ಕುಟುಂಬವನ್ನು ಸಲಹುವ ಜವಾಬ್ದಾರಿಯನ್ನು ಹೊತ್ತಿದ್ದಾಳೆ.
ಈಕೆಯ ಸ್ವಾಭಿಯಾನದ, ಶ್ರಮದ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ, ಅದು ಆಕೆಯ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.