ಹೈದರಾಬಾದ್; ತೆಲಂಗಾಣ ಶಾಸಕರಿಗೆ ಮಂಗಳವಾರ ಅತ್ಯಂತ ಶುಭಕರವಾಗಿದೆ. ರಾಜ್ಯ ಸರ್ಕಾರದಿಂದ ಅವರು ಅತೀ ದುಬಾರಿ ಗ್ಯಾಜೆಟ್ಸ್ಗಳಾದ ಐಪಾಡ್, ಐಫೋನ್ಗಳನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ.
ವಿಧಾನಸಭಾ ಮತ್ತು ವಿಧಾನ ಪರಿಷತ್ ಹೀಗೆ ಎರಡೂ ಮನೆಗಳ ಸದಸ್ಯರಿಗೆ ಈ ದುಬಾರಿ ಗಿಫ್ಟ್ ಪಡೆಯುವ ಸುಯೋಗ ಸಿಕ್ಕಿದೆ.
ಇದಕ್ಕಾಗಿ ಬರೋಬ್ಬರಿ 1.5 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಇಂದು ರಾತ್ರಿ ವಿತ್ತ ಸಚಿವ ಇತೆಲ ರಾಜೇಂದರ್ ಅವರು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಜೌತಣಕೂಟವನ್ನೂ ಏರ್ಪಡಿಸಲಿದ್ದಾರೆ.
ಈ ರೀತಿಯ ದುಬಾರಿ ಉಡುಗೊರೆಗಳನ್ನು ನೀಡುವುದು ಹಿಂದಿನಿಂದಲೂ ಆಂಧ್ರದಲ್ಲಿ ಮುಂದುವರೆದುಕೊಂಡು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.