ನವದೆಹಲಿ: ಏಷ್ಯಾ ಜಾಗತಿಕ ಆರ್ಥಿಕ ಪುನಃಶ್ಚೇತನದ ಭರವಸೆಯ ಕಿರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶನಿವಾರ ’ಅಡ್ವಾನ್ಸಿಂಗ್ ಏಷ್ಯಾ ಕಾನ್ಫರೆನ್ಸ್’ನ್ನು ಉದ್ದೇಶಿಸಿ ಮಾತನಾಡಿದ ಅವರು, ಏಷ್ಯಾದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ಹಲವಾರು ವಿಧದಲ್ಲಿ ಭಾರತ ಏಷ್ಯಾಗೆ ಐತಿಹಾಸಿಕ ಸಹಾಯಗಳನ್ನು ಮಾಡಿದೆ’ ಎಂದರು.
ಪ್ರಜಾಪ್ರಭುತ್ವ ಮತ್ತು ಕ್ಷಿಪ್ರ ಆರ್ಥಿಕ ಪ್ರಗತಿ ಒಟ್ಟಿಗೆ ಸಾಧ್ಯವಿಲ್ಲ ಎಂಬ ಮಾತನ್ನು ಭಾರತ ಸುಳ್ಳೆಂದು ಸಾಬೀತುಪಡಿಸಿದೆ, ಆರ್ಥಿಕ ಪ್ರಗತಿಯನ್ನು ಮತ್ತು ಸಾಮಾಜಿಕ ಸ್ಥಿರತೆಯನ್ನು ಸಾಧಿಸುವುದು ದೊಡ್ಡ ಮತ್ತು ವೈವಿಧ್ಯತೆಯಿಂದ ಕೂಡಿದ ದೇಶಕ್ಕೆ ಸಾಧ್ಯ ಎಂಬುದನ್ನೂ ಭಾರತ ತೋರಿಸಿಕೊಟ್ಟಿದೆ ಎಂದರು.
ನಮ್ಮ ಶೀಘ್ರ ಆರ್ಥಿಕ ಪ್ರಗತಿ ಏಷ್ಯಾದಲ್ಲೇ ವಿಭಿನ್ನವಾದುದು, ನಮ್ಮ ಜೊತೆಗಾರರನ್ನು ಬಲಿಕೊಟ್ಟು ನಾವು ವ್ಯಾಪಾರದಲ್ಲಿ ಲಾಭ ಪಡೆಯಲು ಹೋಗಿಲ್ಲ, ಮೈಕ್ರೋ ಎಕನಾಮಿಕ್ ಸ್ಥಿರತೆಯಿಂದ ನಾವು ಸಾಕಷ್ಟು ಪಡೆದುಕೊಂಡಿದ್ದೇವೆ ಎಂದರು.
ನಾವು ತೆಗೆದುಕೊಂಡ ಹಲವಾರು ಕ್ರಮಗಳಿಂದಾಗಿ ಉದ್ಯಮಶೀಲತೆ ಬೆಳೆಯುತ್ತಿದೆ, ಭ್ರಷ್ಟಾಚಾರ ಮತ್ತು ಮಧ್ಯಪ್ರವೇಶ ಈಗ ನಮ್ಮಿಂದ ಹಿಂದಿದೆ. ಗ್ರಾಮೀಣ ಮತ್ತು ಕೃಷಿಯಲ್ಲಿ ಬಂಡವಾಳವನ್ನು ಹೆಚ್ಚಿಸಿದ್ದೇವೆ. ಯಾಕೆಂದರೆ ಇದರಿಂದಾಗಿಯೇ ಬಹುತೇಕ ಭಾರತೀಯರು ಜೀವಿಸುತ್ತಿದ್ದಾರೆ ಎಂದರು.
ಐಎಂಎಫ್ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಿನ್ ಲಗಾರ್ಡೆ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.