ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯ ದೇಶಬಿಟ್ಟು ಹೊರ ಹೋದ ಪ್ರಕರಣ ಸಂಸತ್ತಿನಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಸರ್ಕಾರವೇ ಅವರನ್ನು ಹೊರ ಹೋಗಲು ಬಿಟ್ಟಿದೆ, ಇದರಲ್ಲಿ ಕ್ರಿಮಿನಲ್ ಕುತಂತ್ರವಿದೆ ಎಂದು ಕಾಂಗ್ರೆಸ್ ಆಪಾದನೆ ಮಾಡಿದೆ.
ಈ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಯುಪಿಎಯ ಅವಧಿಯಲ್ಲೇ ಮಲ್ಯ ಅವರಿಗೆ ಸಾಲವನ್ನು ನೀಡಲಾಗಿತ್ತು. ಮಲ್ಯ ನಮಗೆ ಯೋಗಿಯಲ್ಲ ಎಂದಿದೆ.
ಮಲ್ಯ ಪಡೆದುಕೊಂಡ ರೂ.9091 ಕೋಟಿ ಸಾಲವನ್ನು ವಸೂಲು ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.
ಸಿಬಿಐನ ಲುಕ್ ಔಟ್ ನೋಟಿಸ್ ಇದ್ದರೂ ಮಲ್ಯ ಹೊರ ಹೋಗಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಅವರು ದೇಶಬಿಟ್ಟ ದಿನ ಯಾವುದೇ ಏಜೆನ್ಸಿಯಿಂದ ಅವರನ್ನು ತಡೆಯುವ ಆರ್ಡರ್ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕುಗಳು ಅವರ ಪಾಸ್ಪೋರ್ಟ್ ವಶಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗುವ ಮುನ್ನವೇ ಅವರು ತೆರಳಿಯಾಗಿತ್ತು ಎಂದಿದ್ದಾರೆ.
ಸರ್ಕಾರವೇ ಅವರಿಗೆ ಹೊರ ಹೋಗಲು ಸಹಾಯ ಮಾಡಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿಗೆ ಜೇಟ್ಲಿಯವರು ಬೋಫೋರ್ಸ್ ಹಗರಣದ ಆರೋಪಿ ಕೊಟ್ರೊಚಿಯನ್ನು ನೆನಪಿಸಿಕೊಟ್ಟಿದ್ದಾರೆ. ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು ಕಾಂಗ್ರೆಸ್ ಅವರನ್ನು ದೇಶ ಬಿಡುವಂತೆ ಮಾಡಿದ ಬಗೆಯನ್ನು ವಿವರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.