ಬೆಳ್ತಂಗಡಿ : ಶೋಷಿತರ ಪರ ಧ್ವನಿ ಎತ್ತುವ ಮೂಲಕ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕಾರಣೀಭೂತರಾದ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಬಿಲ್ಲವ ಸಮಾಜ ಪಾಲಿಸಬೇಕು ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ನುಡಿದರು.
ಅವರು ಭಾನುವಾರ ಬೆಳ್ತಂಗಡಿ ಸಂತೆಕಟ್ಟೆ ಸುವರ್ಣ ಆರ್ಕೆಡ್ ಸಭಾಭವನದಲ್ಲಿ ಯುವವಾಹಿನಿ ಸಂಚಾಲನಾ ಸಮಿತಿ ಬೆಳ್ತಂಗಡಿ ನಗರ ಮತ್ತು ಯುವವಾಹಿನಿ ರಿ. ಬೆಳ್ತಂಗಡಿ ಘಟಕ ಇವುಗಳ ಆಶ್ರಯದಲ್ಲಿ ಶ್ರೀ ನಾರಾಯಣಗುರು ತತ್ವ ಸಂದೇಶ ಪ್ರಚಾರ ಕಾರ್ಯಕ್ರಮದ ಉದ್ದೀಪನ ಕಾರ್ಯಕ್ರಮದಲ್ಲಿ ಆಶೀರ್ವಚನ ನಿಡಿದರು.
ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಜಯಾನಂದ ಲಾಲ ಪ್ರಾಸ್ತಾವಿಕವಾಗಿ ಮಾತನಾಡಿ ಯುವ ವಾಹಿನಿ ಘಟಕವು ನಾರಾಯಣಗುರುಗಳ ತತ್ವ ಸಂದೇಶವನ್ನು ಇಟ್ಟುಕೊಂಡಿದ್ದು ವಿದ್ಯೆ ಉದ್ಯೋಗ, ಸಂಪರ್ಕ ಎಂಬ ದ್ಯೇಯದೊಂದಿಗೆ ಶ್ರಮಿಸುತ್ತಿದ್ದು ಇದರೊಂದಿಗೆ ಬಿಲ್ಲವ ಸಮಾಜ ಕೈಜೋಡಿಸಬೇಕು ಎಂದರು.
ವೇದಿಕೆಯಲ್ಲಿ ನಾರಾಯಣಗುರು ತತ್ವ ಪ್ರಚಾರ ಸಮಿತಿ ಸಂಯೋಜಕ ರಘುನಾಥ ಶಾಂತಿ ಉಪಸ್ಥಿತರಿದ್ದರು. ಯುವವಾಹಿನಿ ಕಾರ್ಯದರ್ಶಿ ಅಶ್ವಥ್ ಕಾರ್ಯಕ್ರಮ ನಿರೂಪಿಸಿ ನಗರ ಸಮಿತಿ ಸಂಚಾಲಕ ಸಂತೋಷ್ ಬಿ. ಕರ್ಕೆರ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.