ಬೆಳ್ತಂಗಡಿ : ನೆರಿಯ ಗ್ರಾಮದ ಬಾಂಜಾರು ಎಂಬ ಮಲೆ ಪ್ರದೇಶದಲ್ಲಿ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಇದರ ದಶಮಾನೋತ್ಸವದ ಅಂಗವಾಗಿ ಬೆಳ್ತಂಗಡಿ ತಾಲೂಕು ಮೆಡಿಕಲ್ ಅಸೋಸಿಯೇಶನ್ ಇವರ ಸಹಕಾರದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಮಂಗಳೂರು ಇಲ್ಲಿಯ ತಜ್ಞ ವೈದ್ಯರಿಂದ ಉಚಿತ ತಪಾಸಣಾ ಶಿಬಿರವನ್ನು ಫೆ.27 ರಂದು ಹಮ್ಮಿಕೊಳ್ಳಲಾಗಿದೆ.
ಬಾಂಜಾರು ಸಮುದಾಯ ಭವನದಲ್ಲಿ ನಡೆಯುವ ಶಿಬಿರವನ್ನು ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪತ್ರಕರ್ತ ಸಂಘದಅಧ್ಯಕ್ಷ ಬಿ.ಎಸ್.ಕುಲಾಲ್ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಸಮಾಜ ಕಲ್ಯಾಣಾಧಿಕಾರಿ ಮೋಹನ್ಕುಮಾರ್, ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ಡಿ., ನೆರಿಯ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್, ಸದಸ್ಯರಾದ ಎ.ಬಿ.ಮೀನಾಕ್ಷಿ, ಕೃಷ್ಣ ಪಿ., ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಶಿಬಿರದಲ್ಲಿ ಸಾಮಾನ್ಯ ರೋಗ, ಕಿವಿ, ಮೂಗು ಮತ್ತು ಗಂಟಲು, ಎಲುಬು ಸಮಸ್ಯೆಯ, ಸ್ತ್ರೀ ರೋಗದ, ಮಕ್ಕಳ ಸಮಸ್ಯೆಯ, ಚರ್ಮ ರೋಗದ ತಜ್ಞರು ತಪಾಸಣೆ ನಡೆಸುತ್ತಾರೆ. ನೇತ್ರ ವೈದ್ಯರೂ ಲಭ್ಯರಿರುತ್ತಾರೆ. ಅವಶ್ಯಕತೆ ಇದ್ದಲಿ ಕನ್ನಡಕವನ್ನು ರೂ.80 ಕ್ಕೆ ನೀಡಲಾಗುತ್ತದೆ. ಈ ಎಲ್ಲಾ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದಲ್ಲದೆ ಉಚಿತವಾಗಿ ಔಷಧಿಯನ್ನು ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಗೆಗಾಗಿ ರೋಗಿಯು ಆಸ್ಪತ್ರೆಗೆ ಹೋಗಬೇಕಾದ್ದಲ್ಲಿ ಆಸ್ಪತ್ರೆಯ ಹಸಿರು ಕಾರ್ಡನ್ನು ನೀಡಲಾಗುವುದು. ಹಸಿರು ಕಾರ್ಡಿನಲ್ಲಿ ಶಸ್ತ್ರಚಿಕಿತ್ಸೆಗೆ ಗರಿಷ್ಠ ರೂ. 10,000 ಮತ್ತು ಇತರ ಗರಿಷ್ಠ ರೂ.5000 ತನಕಆಸ್ಪತ್ರೆಯ ಸೌಲಭ್ಯಗಳು ಉಚಿತ. ಕಾರ್ಡು ಪಡೆದ ಒಂದು ತಿಂಗಳೊಳಗೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.