ಬದಿಯಡ್ಕ : ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಉತ್ಸವದ 5 ನೇ ದಿನ ಮಂಗಳವಾರ ರಾತ್ರಿ ವಿಶೇಷ ಸುಡುಮದ್ದು ಪ್ರದರ್ಶನವು ಆಕರ್ಷಣೀಯವಾಗಿತ್ತು.
ರಾತ್ರೆ ಮಹಾಪೂಜೆಯ ನಂತರ ಶ್ರೀ ಭೂತಬಲಿ, ಅಶ್ವತ್ಥಕಟ್ಟೆಯಲ್ಲಿ ಶ್ರೀ ದೇವರಿಗೆ ಮಹಾಪೂಜೆ, ವಿಶೇಷ ಸುಡುಮದ್ದು ಪ್ರದರ್ಶನ, ನವಮಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ನೃತ್ತ ಸೇವೆ ಜರಗಿತು. ಸಂಜೆ ಯೋಗೀಶ್ ಶರ್ಮ ಬಳ್ಳಪದವು ಮತ್ತು ಬಳಗದವರಿಂದ `ಗಾನ ಮಾಧುರ್ಯ’ ಕಾರ್ಯಕ್ರಮ ಜರಗಿತು.
ಚಲಿಸುವ ಗೋ ಆಲಯ : ಕಾಸರಗೋಡು ಗಿಡ್ಡ ತಳಿಯ ಗೋವಿನ ಮಹತ್ವವನ್ನು ಸಾರುವುದಕ್ಕೋಸ್ಕರ ನಾಡಿನಾದ್ಯಂತ ಸಂಚರಿಸುವ ಗಣೇಶ್ ಭಟ್ ಮುಣ್ಚಿಕ್ಕಾನ ಅವರ ಚಲಿಸುವ ಗೋ ಆಲಯವು ಈ ಸಂದರ್ಭದಲ್ಲಿ ಭಕ್ತರಿಗಾಗಿ ತೆರೆದುಕೊಂಡಿತ್ತು.
ಬೆಳಗ್ಗಿನಿಂದ ತಡರಾತ್ರಿ ತನಕ ಅನೇಕ ಭಕ್ತರು ಗೋಮಾತೆಗೆ ಆರತಿಯನ್ನು ಬೆಳಗಿದರು. ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯ ಅಡ್ವಕೇಟ್ ಕೆ. ಶ್ರೀಕಾಂತ್, ಕ್ಷೇತ್ರದ ಧರ್ಮದರ್ಶಿ ಉಪ್ಪಂಗಳ ವಾಸುದೇವ ಭಟ್ಟ ಮೊದಲಾದವರು ಆರತಿಯನ್ನು ಬೆಳಗಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.