ಬೆಳ್ತಂಗಡಿ : ಅಂಬೇಡ್ಕರ್ ಕೇವಲ ಸಂವಿಧಾನದ ಶಿಲ್ಪಿ ಮಾತ್ರವಲ್ಲ ಅವರು ಆಧುನಿಕ ಭಾರತದ ಶಿಲ್ಪಿಯಾಗಿದ್ದಾರೆ. ಕಳೆದು ಹೋಗಿದ್ದ ಬುದ್ದನನ್ನು ಮರಳಿತಂದು ಶೋಷಿತ ಸಮುದಾಯವನ್ನು ಬುದ್ದನೆಡೆಗೆ ಆಮೂಲಕ ಪ್ರಭುದ್ದತೆಯೆಡೆಗೆ ಕೈಹಿಡಿದು ನಡೆಸಿ, ಎಲ್ಲಾ ಅಮಾನವೀಯ ಶೋಷಣೆಗಳ ನಡುವೆಯು ಹಿಂಸೆಯ ದಾರಿಯನ್ನು ತೋರದೆ ಅಹಿಂಸೆಯ ಮಾರ್ಗದಲ್ಲಿ ಜನಸಮುದಾಯವನ್ನು ಮುನ್ನಡೆಸಿದ ಅಂಬೇಡ್ಕರ್ ಅವರಿಂದಾಗಿ ಭಾರತಇಂದು ಹೀಗೆ ಉಳಿದುಕೊಂಡಿದೆ ಎಂದು ಹಿರಿಯ ಸಾಹಿತಿ, ಚಿಂತಕ ಪ್ರಸಾದ್ರಕ್ಷಿದಿ ಹೇಳಿದರು.
ಅವರು ಮಂಗಳವಾರ ತಾಲೂಕು ಆಡಳಿತ ಬೆಳ್ತಂಗಡಿ, ತಾಲೂಕು ಪಂಚಾಯತು ಬೆಳ್ತಂಗಡಿ, ಸಮಾಜಕಲ್ಯಾಣ ಇಲಾಖೆ ಹಾಗು ನಗರ ಪಂಚಾಯತು ಬೆಳ್ತಂಗಡಿ ಇದರ ವತಿಯಿಂದ ಬೆಳ್ತಂಗಡಿ ತಾಲೂಕು ಪಂಚಾಯತು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬಾಬಾ ಸಾಹೇಬ್ಅಂಬೇಡ್ಕರ್ಅವರ 124ನೇಯ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮತನಾಡಿದರು. ಆಧುನಿಕ ಭಾರತದ ಚಿಂತನೆಗಳು, ಆಡಳಿತ ನೀತಿ, ಆರ್ಧಿಕ ನೀತಿಗಳನ್ನು ರೂಪಿಸುವಲ್ಲಿ ಅಂಬೇಡ್ಕರ್ಅವರ ಕೊಡುಗೆ ಅಮೂಲ್ಯವಾದುದು.
ದಲಿತರ ಸೂರ್ಯ ಅಂಬೇಡ್ಕರ್ ಕೇವಲ ದಲಿತರನ್ನು ಮಾತ್ರವಲ್ಲ ಎಲ್ಲರನ್ನು ಮನುಷ್ಯತ್ವದೆಡೆಗೆ ಮುನ್ನಡೆಸಿದ ಮಹಾನ್ ನಾಯಕರಾಗಿದ್ದಾರೆ ವೈದಿಕ ಧರ್ಮದಿಂದ ಬದುಕು ಸಾಧ್ಯವಿಲ್ಲ ಎಂದು ಕಂಡುಕೊಂಡಾಗ ಅಂಬೇಡ್ಕರ್ ಅವರು ಶೋಷಿತಜನತೆಗೆ ಬಂದೂಕು ಹಿಡಿಯಿರಿಎಂದುಕರೆ ನೀಡಿದ್ದರೆ ಇಡೀ ದೇಶವೆ ನುಚ್ಚು ನೂರಾಗುತ್ತತ್ತು. ಆದರೆ ಅವರು ಬುದ್ದನ ಶಾಂತಿಯ ಮಾರ್ಗವನ್ನು ಅನುಸರಿಸಿದರು.ಅಂಬೇಡ್ಕರ್ ಕೇವಲ ದಲಿತರು ಮಾತ್ರ ನೆನೆಯಬೇಕಾದ ನಾಯಕರಲ್ಲಇಡೀದೇಶವೇಅವರತ್ತಕೃತಜ್ಞತೆಯಿಂದಿರಬೇಕಾಗಿದೆಎಂದರು.
ಸ್ವಾತಂತ್ರಾನಂತರ ಗಾಂಧಿಯವರು ಮಾತ್ರ ನಮ್ಮ ಗ್ರಾಮಗಳಿಗೆ ತಲುಪದ್ದರು ಅಂಬೇಡ್ಕರ್ಇಲ್ಲಿಯು ಅಸ್ಪ್ರಶ್ಯರಾಗಿದ್ದರು. ಆದರೆ ಬಳಿಕದಲಿತ ಚಳವಳಿಗಳು ಅವರನ್ನು ಹಳ್ಳಿ ಹಳ್ಳಿಗಳಿಗೆ ತಲುಪಿಸಿದರು.ಇಷ್ಟೆಲ್ಲ ಬದಲಾವಣೆಗಳ ಹೋರಾಟಗಳ ಬಳಿಕವು ನಮ್ಮದೇಶದ ಹಳ್ಳಿಗಳಲ್ಲಿ ಇನ್ನೂ ಪಾಳೆಗಾರಿಕೆಯ ವ್ಯವಸ್ತೆ, ಅಸ್ಪ್ರಶ್ಯತೆ ಉಳಿದುಕೊಂಡಿದೆ. ಶೋಷಿತ ಸಮುದಾಯಗಳು ಎಲ್ಲ ಶೋಷಣೆಗಳನ್ನು ಭೂಮಿ ತಾಯಿಯಂತೆ ಸಹಿಸಿಕೊಂಡು ಬರುತ್ತಿದ್ದಾರೆಅದನ್ನು ಹೋಗಲಾಡಿಸಲು ಪ್ರಯತ್ನಿಸಬೇಕಾಗಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಪಂಚಯತ್ ಅಧ್ಯಕ್ಷೆ ಜಯಂತಿ ಪಾಲೇದು ನೆರವೇರಿಸಿದರು. ಅಧ್ಯಕ್ಷತೆಯನ್ನು ತಾಪಂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಚೇತನಾಚಂದ್ರಶೇಖರ್ ವಹಿಸಿದ್ದರು, ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸ್ಧಾಯಿಸಮಿತಿ ಅಧ್ಯಕ್ಷೆ ಸಿ ಕೆ ಚಂದ್ರಕಲ, ತಾಪಂಉಪಾಧ್ಯಕ್ಷ ವಿಷ್ಣು ಮರಾಠೆ, ತಹಶೀಲ್ದಾರ್ ಬಿಎಸ್ ಪುಟ್ಟಶೆಟ್ಟಿ, ತಾಪಂಕಾರ್ಯನಿರ್ವಹಣಾಧಿಕಾರಿ ಕೆ ಎನ್ ಮಹಂತೇಶ್ ಉಪಸ್ಧಿತರಿದ್ದರು. ಈ ಸಂಧರ್ಭದಲ್ಲಿ ಉತ್ತಮ ಸಾಧನೆತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ಸಮಾಜ ಕಲ್ಯಾಣ ಇಲಾಖೆಯ ವಿವಧ ಸೌಲಭ್ಯಗಳನ್ನು ವಿತರಿಸಲಾಯಿತು. ಸಮಾಜ ಕಲ್ಯಾಣ ಅಧಿಕಾರಿ ಮೋಹನ್ ಸ್ವಾಗತಿಸಿದರು, ಹೇಮಲತಕಾರ್ಯಕ್ರಮ ನಿರೂಪಿಸಿದರು, ಅರವಿಂದಚೊಕ್ಕಾಡಿ ಅಧಿತಿಗಳನ್ನು ಪರಿಚಯಿಸಿದರು, ಜಯಾನಂದ ವಂದಿಸಿದರು.
ಇಕ್ಕಟ್ಟಾದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಅಂಬೇಡ್ಕರ್ಜಯಂತಿ ಕಾರ್ಯಕ್ರಮವನ್ನುಏರ್ಪಡಿಸಲಾಗಿತ್ತು ಸ್ಧಳಾವಕಾಶದ ಕೊರತೆಯಿಂದ ಬಂದವರೆಲ್ಲರು ಕುಳಿತುಕೊಳ್ಳಲು ಜಾಗವಿಲ್ಲದೆ ಪರದಾಡಬೇಕಾಗಿ ಬಂತು. ಶಾಸಕರು ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಸುಸಜ್ಜಿತವಾದ ಸ್ಧಳಾವಕಾಶವಿರುವ ಅಂಬೇಡ್ಕರ್ ಭವನವಿದ್ದರು ಅಲ್ಲಿ ಕಾರ್ಯ್ಯಕ್ರಮ ಆಯೋಜಿಸದೆ ಇಕ್ಕಟ್ಟಾದ ಸಭಾಂಗಣದಲ್ಲಿ ಆಯೋಜಿಸಿದ್ದು ವಿಚಿತ್ರವಾಗಿತ್ತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.