ಬೆಳ್ತಂಗಡಿ : ಚುನಾವಣೆಯ ಪೂರ್ವಭಾವಿಯಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಪುಂಜಾಲಕಟ್ಟೆ ಪೋಲಿಸ್ ಠಾಣಾ ವತಿಯಿಂದ ಪೋಲಿಸ್ ಜನ ಸಂಪರ್ಕ ಸಭೆಯನ್ನು ಮಡಂತ್ಯಾರುಜೋನ್ ಲಿನ್ ಕಾಂಪ್ಲೆಕ್ಸ್ನ ಸಭಾಂಗಣದಲ್ಲಿ ನಡೆಸಲಾಯಿತು.
ನೀತಿ ಸಂಹಿತೆ ಮತ್ತು ಸಾರ್ವಜನಿಕರು ಮುಕ್ತ ಹಾಗೂ ಶಾಂತಿಯುತವಾಗಿ ಮತದಾನ ನಡೆಯಲು ಸಹಕರಿಸುವಂತೆ, ಹೆಲ್ಮೆಟ್ಕಡ್ಡಾಯದ ಬಗ್ಗೆ ವೃತ್ತ ನಿರೀಕ್ಷಕರಾದ ಲಿಂಗಪ್ಪ ಪೂಜಾರಿಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸಾರ್ವಜನಿಕ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಸಾರ್ವಜನಿಕರು ಅವಕಾಶ ಮಾಡಿಕೊಡಬಾರದು. ಅಂತಹಯಾವುದೇ ಘಟನೆಗಳು ನಡೆದರೆ ಸಾರ್ವಜನಿಕರುತಕ್ಷಣವೇ ಪೋಲಿಸ್ ಠಾಣೆಗೆ ತಿಳಿಸಬೇಕು ಮತ್ತು ನೀತಿ ಸಂಹಿತೆಯು ಜಾರಿಯಲ್ಲಿರುವುದರಿಂದ ನೀತಿ ಸಂಹಿತೆಯನ್ನುಉಲ್ಲಂಘಿಸಬಾರದುಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುಂಜಾಲಕಟ್ಟೆ ಪೋಲಿಸ್ ಠಾಣಾಧಿಕಾರಿ ಲತೇಶ್ಕುಮಾರ್ಡಿ.ಕೆ, ಮಾಲಾಡಿ ಗ್ರಾ.ಪಂ ಸದಸ್ಯ ಪುನೀತ್, ಮಡಂತ್ಯಾರು ಗ್ರಾ.ಪಂ. ಸದಸ್ಯಅಬ್ದುಲ್ ರಹಿಮಾನ್ ಪಡ್ಪು, ಉದ್ಯಮಿಗಳಾದ ಸತೀಶ್ ಕಾರಂದೂರು, ಬ್ಲೇನಿ ಡಿ”ಸೋಜ , ಸುರೇಶ್ ಮೈರ, ಚಿದಾನಂದರೈ, ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತುಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪುಂಜಾಲಕಟ್ಟೆ ಠಾಣಾಧಿಕಾರಿ ಲತೇಶ್ಕುಮಾರ್ಡಿ.ಕೆ ಅವರು ಸ್ವಾಗತಿಸಿ, ಸಿಬ್ಬಂದಿ ಪಿ.ಎಸ್.ವೆಂಕಪ್ಪ ಅವರು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.