ಬೆಳ್ತಂಗಡಿ: ಪಾಲೇದು ಚುನಾವಣಾ ಬಹಿಷ್ಕಾರ ಸಮಿತಿ ಸಂಸದರನ್ನು ಹಾಗೂ ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ.
ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಲೇದುವಿನ ಲಿಂಗಸ್ಥಳದಲ್ಲಿರುವ ಸೇತುವೆ, ಕುದ್ರಡ್ಕ-ಪಾಲೇದು-ಲಿಂಗಸ್ಥಳದವರೆಗೆ ರಸ್ತೆಗೆ ಡಾಮರೀಕರಣ, ನ್ಯಾಯಬೆಲೆ ಅಂಗಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗೂ ಹಾಲಿನ ಡೈರಿ ಮತ್ತು ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಾಲೇದು ಚುನಾವಣಾ ಬಹಿಷ್ಕಾರ ಸಮಿತಿ ವತಿಯಿಂದ ಪ್ರತಿಭಟನೆ ಮತ್ತು ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸುವಂತಹ ಕಾರ್ಯವನ್ನು ಅನೇಕ ಬಾರಿ ಮಾಡಿದೆ.
ಪಾಲೇದು ನಾಗರಿಕರ ಚುನಾವಣಾ ಬಹಿಷ್ಕಾರ ಮಾಡುವ ನಿರ್ಧಾರದ ಬಗ್ಗೆ ಸಾರ್ವಜನಿಕರ ಬೇಡಿಕೆಯ ಮಾಹಿತಿ ಪಡೆಯಲೆಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಬೆಳ್ತಂಗಡಿ ತಾಲೂಕು ಶಾಸಕರಾದ ವಸಂತ ಬಂಗೇರ ಅವರು ಪಾಲೇದು ವಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪಾಲೇದು ಚುನಾವಣಾ ಬಹಿಷ್ಕಾರ ಸಮಿತಿಯ ಸದಸ್ಯರು ಮತ್ತು ಊರಿನ ನಾಗರಿಕರು ಸಂಸದರ ಮತ್ತು ಶಾಸಕರ ಮುಂದೆ ತಮ್ಮ ಬೇಡಿಕೆಯನ್ನಿಟ್ಟರು. ಈ ವೇಳೆ ಮಾತಾನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ನಾನು ನಿಮ್ಮ ಮನವೂಲಿಸಲು ಬಂದಿಲ್ಲ, ಈಗ ನೀತಿ ಸಂಹಿತೆ ಇರುವುದರಿಂದ ಯಾವುದೇ ಭರವಸೆಯನ್ನು ನೀಡುವುದಿಲ್ಲ. ಮತದಾನದ ಸಮಯ ಮುಗಿದ ತಕ್ಷಣ ರಸ್ತೆ ಮತ್ತು ಸೇತುವೆಯ ಬಗ್ಗೆ ಸೂಕ್ತ ವ್ಯವಸ್ಥೆಯನ್ನು ಮಾಡುವುದಾಗಿ ತಿಳಿಸಿದರು. ಈ ವೇಳೆ ಸಮಿತಿಯ ಸದಸ್ಯರು ಬರವಣಿಗೆಯ ಮೂಲಕ ಭರವಸೆ ಕೊಡಬೇಕು ಎಂದು ಒತ್ತಾಯಿಸಿದ್ದರು.
ಶಾಸಕ ವಸಂತ ಬಂಗೇರ ಅವರು ಮಾತಾನಾಡಿ ಈಗಾಗಲೇ ರಸ್ತೆಯ ಮತ್ತು ನ್ಯಾಯ ಬೆಲೆ, ಹಾಗೂ ಹಾಲಿನ ಡೈರಿಯ ವ್ಯವಸ್ಥೆಯನ್ನು ಚುನಾವಣೆ ಬಳಿಕ ಮಾಡುವುದಾಗಿ ತಿಳಿಸಲಾಗಿದೆ. ಈ ವೇಳೆ ಮಾತಾನಾಡಿದ ಸಮಿತಿ ಸದಸ್ಯರು ಲಿಂಗ ಸ್ಥಳದಲ್ಲಿರುವ ಸೇತುವೆಯನ್ನು ಮಾಡಬೇಕು, ಈ ಬಗ್ಗೆ ವಿಶ್ವಾಸವಿದೆ ಎಂದು ತಿಳಿಸಿದರು.
ಚುನಾವಣಾ ಬಹಿಷ್ಕಾರ ಮುಂದುವರಿಯಲಿದೆ ಎಂದು ಸಮಿತಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.