ಬೈಂದೂರು : ಯಡ್ತರೆ ಗ್ರಾಪಂ ವ್ಯಾಪ್ತಿಯ ಮುಲ್ಲಿಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದತ್ತು ಸ್ವೀಕಾರ, ವೈವಿಧ್ಯಮಯ ಚಿಣ್ಣರೋತ್ಸವ ಹಾಗೂ ವೈಶಿಷ್ಟಪೂರ್ಣ ಕಲಿಕೋತ್ಸವದ ಸಮಾರೋಪ ಸಮಾರಂಭ ಶಾಲೆಯ ಹೊಂಗಿರಣ ಸಭಾಂಗಣದಲ್ಲಿ ನಡೆಯಿತು.
ಈ ಎಲ್ಲಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಸರ್ವಾಧ್ಯಕ್ಷತೆ ವಹಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಶಿಕ್ಷಣ ಇಲಾಖೆ ಒಂದು ಪಾವಿತ್ರತೆಯಿಂದ ಕೂಡಿದ್ದು, ಇತ್ತೀಚೆಗೆ ದಾರಿ ತಪ್ಪುತ್ತಿರುವುದು ವಿಷಾದನೀಯ. ಬೈಂದೂರು ಕ್ಷೇತ್ರದಲ್ಲಿ ಈವರೆಗೆ ಇಲಾಖೆಗೆ ಒಂದು ಕಪ್ಪುಚುಕ್ಕಿ ಇರಲಿಲ್ಲಾ. ಬಡವರಿಗಾಗಿ ಮಾಡಿದ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳ್ಳಬೇಕೆ ಹೊರತು ಅದರಲ್ಲಿ ಅವ್ಯವಹಾರ ಗೊಂದಲಗಳಾಗಬಾರದು ಎಂದು ಇತ್ತೀಚಿನ ನಡೆದ ಸಿಆರ್ಪಿಯ ಲಂಚದ ಹಗರಣವನ್ನು ಉಲ್ಲೇಖಿಸದೇ ಪರೋಕ್ಷವಾಗಿ ಪ್ರಸ್ತಾಪಿಸಿದರು. ಸಮಾಜಸೇವೆ ಶಿಕ್ಷಣ ಸೇವಾಮನೋಭಾವನೆ ವಿಶೇಷ ಲವಲವಿಕೆಯ ಯುವ ಶಿಕ್ಷಕರ ತಂಡಗಳಿಗೆ ತರಬೇತಿ ನೀಡಬೇಕಾಗಿದೆ. ಸರಕಾರದ ಯೋಜನೆ ಕಾನೂನು ರೀತಿಯಲ್ಲಿ ಅನುಷ್ಟಾನಗೊಳಿಸುವುದು ಕಡ್ಡಾಯ ಎಂದರು.
ಮುಲ್ಲಿಬಾರು ಸ.ಹಿ.ಪ್ರಾ ಶಾಲೆಯನ್ನು ದತ್ತು ಪಡೆದ ಉದ್ಯಮಿ ಹಾಗೂ ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿಯವರಿಗೆ ದಾಖಲೆಗಳನ್ನು ಹಸ್ತಾಂತರಿಸಿ ಶಾಸಕರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಇಲಾಖಾ ಸಮವಸ್ತ್ರವನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಗ್ರಾಪಂ ಸಹಕಾರದಲ್ಲಿ ಶಾಲೆಗೆ ೩೦ಸಾವಿರ ವೆಚ್ಚದ ಭೋಧನಾ ಉಪಕರಣ ನೀಡಲಾಯಿತು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ ‘ಹೊಂಗಿರಣ’ ಗೋಡೆಪತ್ರಿಕೆ ಬಿಡುಗಡೆಗೊಳಿಸಿದರೆ, ತಾಪಂ ಸದಸ್ಯ ಎಸ್ ರಾಜು ಪೂಜಾರಿ ‘ಸಹ್ಯಾದ್ರಿ’ ಹಸ್ತಪತ್ರಿಕೆ ಅನಾವರಣಗೊಳಿಸಿದರು.
ಕ್ಷೇತ್ರದ ಶಿಕ್ಷಣ ಸಮನ್ವಯ ಅಧಿಕಾರಿ ಸುರೇಶ್, ನಿವೃತ್ತ ಉಪನ್ಯಾಸಕ ಎಸ್ ಜನಾರ್ದನ ಮರವಂತೆ, ಗ್ರಾಪಂ ಸದಸ್ಯರಾದ ಲಲಿತಾ, ನಾಗಪ್ಪ ಮರಾಠಿ ಹೊಸೂರು, ಸಿ.ಜೆ ರೋಯಿ ಕುಳ್ಳಂಕಿ, ಕೆ. ನಯನ ಭಂಡಾರಿ ಊದೂರು, ಎಸ್ಡಿಎಮ್ಸಿ ಅಧ್ಯಕ್ಷ ತಿಮ್ಮ ಮರಾಠಿ, ಉಪಾಧ್ಯಕ್ಷೆ ಪದ್ಮಾವತಿ, ಪಾಲಕರ ಸಮಿತಿ ಅಧ್ಯಕ್ಷ ವೆಂಕಟೇಶ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಗಿರೀಶ್ ಮೇಸ್ತ ಸ್ವಾಗತಿಸಿ, ಸುಧಾಕರ ಪಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.