ನವದೆಹಲಿ : ಆರ್. ಎಸ್. ಎಸ್. ಮತ್ತು ಬಿಜೆಪಿ ಸೇರಿ ದೇಶದಲ್ಲಿ ಗಲಭೆಗಳು ಸೃಷ್ಟಿಸಲು ಕಾರಣವಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ್ದಾರೆ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ 98 ನೇ ಜಯಂತಿ ಅಂಗವಾಗಿ ಗುರುವಾರ ನವದೆಹಲಿಯಲ್ಲಿ ಯುವ ಕಾಂಗ್ರೆಸ್ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಈ ಆರೋಪ ಮಾಡಿದ್ದಾರೆ.
ಜಾತಿ ಆಧಾರದ ಮೇಲೆ ದೇಶವನ್ನು ಒಡೆಯುವ ಕೆಲಸವನ್ನು ಆರ್ಎಸ್ಎಸ್ ಮತ್ತು ಬಿಜೆಪಿ ಮಾಡಿ, ಗಲಭೆಗಳು ಹೆಚ್ಚಲು ಕಾರಣವಾಗುತ್ತಿವೆ. ಕಾಂಗ್ರೆಸ್ ಎಂದೆಂದಿಗೂ ಏಕತೆಯನ್ನು ಬಯಸುತ್ತದೆ. ಹಾಗಾಗಿ ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ನನ್ನ ಬಗ್ಗೆ ಪರೋಕ್ಷವಾಗಿ ಹೋರಾಟ ಮಾಡಬೇಕೆಂದಿಲ್ಲ, ನನ್ನ ವಿರುದ್ಧ ತನಿಖೆಗೆ ಆದೇಶಿಸಿ, ತಪ್ಪಿತಸ್ಥ ಎಂದು ಸಾಬೀತಾದರೆ ನಾನು ಜೈಲಿಗೆ ಹೋಗಲು ಸಿದ್ಧ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಸವಾಲು ಮಾಡಿದ್ದಾರೆ.
ದ್ವಿಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಈ ಹೇಳಿಕೆಯನ್ನು ರಾಹುಲ್ ನೀಡಿದ್ದಾರೆ. ಸುಬ್ರಮಣಿಯನ್ ಸ್ವಾಮಿಯವರು ಮೋದಿಯವರ ಏಜೆಂಟ್. ಯಾವಾಗಲೂ ನನ್ನ ಮತ್ತು ಕುಟುಂಬದ ಬಗ್ಗೆ ಆರೋಪಿಸುತ್ತಲೇ ಇರುತ್ತಾರೆ. ನಿಮ್ಮ ಪ್ರತಿಯೊಂದು ಸುಳ್ಳುಗಳನ್ನೂ ನಾನು ಬಯಲು ಮಾಡುತ್ತೇನೆ. ನಾನು ಹೋರಾಟಕ್ಕೆ ಎಂದೂ ಹೆದರುವುದಿಲ್ಲ. ನಿಮಗೆ ಧೈರ್ಯವಿದ್ದರೆ ನನ್ನೊಂದಿಗೆ ನೇರವಾಗಿ ಹೋರಾಡಿ ಎಂದು ಸವಾಲು ಹಾಕಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.