ಬೆಳ್ತಂಗಡಿ : ಧರ್ಮಸ್ಥಳ- ಮಂಗಳೂರು ಮಾರ್ಗದಲ್ಲಿ ಬಸ್ಗಳು ಸರಿಯಾದ ಸಮಯಕ್ಕೆ ಸಂಚರಿಸದೆ ಇರುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದು ಇದನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ನ 15 ರಂದು ನಿತ್ಯ ಪ್ರಯಾಣಿಕರು ಪ್ರತಿಭಟನೆ ನಡೆಸಲಿರುವುದಾಗಿ ಚಂದ್ರಮೋಹನ್ ಮರಾಠೆ ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಬುಧವಾರಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.ಪ್ರಯಾಣಿಕರಿಗೆಆಗುತ್ತಿರುವ ತೊಂದರೆಗಳ ಬಗ್ಗೆ ಈಗಾಗಲೆ ಹಲವು ಬಾರಿರಾಜ್ಯ ಸಾರಿಗೆ ಸಂಸ್ತೆಯ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗುತ್ತಿರುವುದಾಗಿ ಅವರು ತಿಳಿಸಿದರು.
ಇದೀಗ ಮಂಗಳೂರು ಡಿಪ್ಪೋಗೆ ಈ ರೂಟಿನ ಪೂರ್ಣಜವಾಬ್ದಾರಿಯನ್ನು ವಹಿಸಲಾಗಿರುವುದರಿಂದ ಪುತ್ತೂರು ವಿಭಾಗ ಹಾಗೂ ಧರ್ಮಸ್ಥಳ ಡಿಪ್ಪೋದವರಿಗೆ ಇಲ್ಲಿನ ಬಸ್ಗಳ ಮೇಲೆ ಯಾವುದೇ ನಿಯಂತ್ರಣವಿಲ್ಲವಾಗಿದ್ದು ಇದೇ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಸಮಸ್ಯೆಗಳ ಬಗ್ಗೆ ಮಂಗಳೂರಿನ ಸಾರಿಗೆ ಡಿಸಿ ಉದಾಸೀನ ತೋರಿಸುತ್ತಿದ್ದಾರಲ್ಲದೆ, ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ. ಹೀಗಾಗಿ ನ. 15 ರಂದು ಬೆಳ್ತಂಗಡಿಯಲ್ಲಿ ಸಾಂಕೇತಿಕವಾಗಿ ರಸ್ತೆತಡೆ ನಡೆಸಿ ಬಳಿಕ ಪ್ರತಿಭಟನೆ ನಡೆಸಲಾಗುವುದು ಮಂಗಳೂರು ವಿಭಾಗದ ಡಿಸಿ ಹಾಗೂ ಇತರ ಅಧಿಕಾರಿಗಳು ಬರುವವರೆಗೆ ಹೋರಾಟ ನಡೆಯಲಿದೆಎಂದು ತಿಳಿಸಿದರು.
ಪ್ರತಿ ದಿನ ಮಂಗಳೂರಿಗೆ ಪ್ರಯಾಣಿಸುವವರು ಬೆಳಿಗ್ಗೆ ಹಾಗೂ ಸಂಜೆ ಬಸ್ ಇಲ್ಲದೆ ಪರದಾಡುವ ಸ್ಥಿತಿಯಿದೆ. ಮಂಗಳೂರಿನಿಂದ ಒಂದು ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಬಸ್ಗಳೆಲ್ಲ ಗಂಟೆಗಟ್ಟಲೆ ತಡವಾಗಿ ಬರುತ್ತಿದ್ದು ಇದರಿಂದ ಗ್ರಾಮೀಣಜನರಿಗೂ ಸಮಸ್ಯೆಯಾಗಿದೆ. ಸಂಜೆ ಕೆಲಸ ಮುಗಿಸಿ ಮಂಗಳೂರಿನಿಂದ ಹೊರಟರೆ ಎಷ್ಟು ಗಂಟೆಗೆ ಮನೆ ಸೇರಬಹುದು ಎಂಬುದೇ ತಿಳಿಯದಂತಾಗಿದೆ ಎಂದು ಅವರು ವಿವರಿಸಿದರು. ಈ ಹೋರಾಟಕ್ಕೆಎಲ್ಲ ಪ್ರಯಾಣಿಕರ ಬೆಂಬಲವಿದ್ದು ವಿವಿಧ ಸಂಘ ಸಂಸ್ಥೆಗಳ ಬೆಂಬಲವನ್ನೂ ಕೇಳಲಾಗಿದೆ ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ನವೀನ್ ಬೆಳಾಲು, ಹರ್ಷಕೋಟ್ಯಾನ್ ಮದ್ದಡ್ಕ, ವಿನೋದ್ಶೆಣೈ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.