ಮಂಡ್ಸೋರ್ : ದಸರಾದ ಕೊನೆಯ ದಿನ ವಿಜಯದಶಮಿಯಂದು ಅಸುರನಾದ ರಾವಣನನ್ನು ದಹನ ಮಾಡುವ ಪಧ್ಧತಿಯಿದೆ. ರಾವಣನ ಬೃಹತ್ ಪ್ರತಿಮೆಯನ್ನು ನಿರ್ಮಿಸಿ ಅದಕ್ಕೆ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಒಳ್ಳೆಯದರ ವಿರುದ್ಧ ಕೆಟ್ಟದರ ಸೋಲು ಎಂಬುದನ್ನು ಸಾಂಕೇತಿಕವಾಗಿ ತೋರಿಸುವ ಸಂಪ್ರದಾಯವಿದು.
ಆದರೆ ಮಧ್ಯಪ್ರದೇಶದ ಮಂಡ್ಸೋರ್ನ ವಿಧಿಶ ಗ್ರಾಮದಲ್ಲಿ ರಾವಣನನ್ನು ಸುಡುವ ಬದಲು ಪೂಜಿಸಲಾಗುತ್ತದೆ, ರತ್ಲಂ ಮತ್ತು ಇಂಧೋರ್ನ ಕೆಲ ಪಂಗಡಗಳು ಕೂಡ ಅಸುರರ ರಾಜನನ್ನು ಆರಾಧಿಸುತ್ತದೆ.
ರಾವಣನ ಪತ್ನಿಯಾದ ಮಂಡೋದರಿ ಮಂಡ್ಸೋರ್ ಪ್ರದೇಶಕ್ಕೆ ಸೇರಿದವಳು, ಹಾಗಾಗೀ ರಾವಣ ಈ ಪ್ರದೇಶದ ಅಳಿಯ ಎಂಬ ನಂಬಿಕೆ ಇಲ್ಲಿಯವರಲ್ಲಿದ್ದು. ಹೀಗಾಗಿ ಆತನನ್ನು ಪೂಜಿಸಲಾಗುತ್ತದೆ.
ಪ್ರತಿ ವರ್ಷ ರಾವಣ ಪ್ರತಿಮೆಯನ್ನು ಸ್ಥಾಪಿಸಿ ಮಹಿಳೆಯರು, ಪುರುಷರು ಪೂಜೆ ಸಲ್ಲಿಸುತ್ತಾರೆ. ಇಲ್ಲಿ ರಾವಣನ ದೇಗುಲವೂ ಇದ್ದು, ರಾವಣ ಬಾಬಾ ನಮಃ ಎಂಬ ಮಂತ್ರದ ಮೂಲಕ ಇಲ್ಲಿ ರಾವಣನನ್ನು ಒಲಿಸಿಕೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.