ನವದೆಹಲಿ: ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮ ನವಮಿ ಅದ್ಧೂರಿಯಿಂದ ಆಚರಿಸಲ್ಪಡುತ್ತಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದೆ. ನಾಳೆಯಿಂದ ಏ.17ರ ರಾಮ ನವಮಿವರೆಗೆ ರಾಮ ಲಲಾನಿಗೆ ವಿಶೇಷ ಖಾದಿ ವಸ್ತ್ರ ತೊಡುವುದಾಗಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ.
ಅಯೋಧ್ಯೆಯಲ್ಲಿ ನಾಳೆ ಅಂದರೆ ಮಂಗಳವಾರದಿಂದ ಚೈತ್ರ ನವರಾತ್ರಿ ಆರಂಭವಾಗುತ್ತಿದೆ. ಏಪ್ರಿಲ್ 17 ರಂದು ರಾಮ ನವಮಿ ಹಬ್ಬ. ಈ ಹಬ್ಬವನ್ನು ಆಚರಿಸಲು ರಾಮನಗರಿ ಅಯೋಧ್ಯೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ವರ್ಷ ರಾಮ ನವಮಿಯಂದು, ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಮೊದಲ ಬಾರಿಗೆ ರಾಮಲಾಲಾ ವಿಗ್ರಹವನ್ನು ಪೂಜಿಸಲಾಗುವುದು. ಇದಕ್ಕಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶೇಷ ವ್ಯವಸ್ಥೆ ಮಾಡಿದೆ.
ಈ ಏರ್ಪಾಡಿನ ಅಡಿಯಲ್ಲಿ, ಟ್ರಸ್ಟ್ ಭಗವಾನ್ ರಾಮಲಾಲಾ ಅವರಿಗೆ ವಿಶೇಷ ಬಟ್ಟೆಗಳನ್ನು ಸಿದ್ಧ ಮಾಡಿದೆ. ಚೈತ್ರ ನವರಾತ್ರಿಯ ಮೊದಲ ದಿನದಿಂದ ರಾಮನವಮಿ ಹಬ್ಬದವರೆಗೆ ಭಗವಾನ್ ರಾಮಲಾಲಾ ಈ ವಿಶೇಷ ಬಟ್ಟೆಗಳನ್ನು ಧರಿಸುತ್ತಾರೆ ಎಂದು ಟ್ರಸ್ಟ್ ತಿಳಿಸಿದೆ. ಈ ಬಟ್ಟೆಗಳು ಖಾದಿಯವು. ಇವುಗಳ ಮೇಲೆ ಬೆಳ್ಳಿ ಮತ್ತು ಚಿನ್ನವನ್ನು ಮುದ್ರಿಸಲಾಗಿದೆ. ಚೈತ್ರ ನವರಾತ್ರಿಯಲ್ಲಿ ಭಗವಾನ್ ರಾಮಲಾಲಾ ಯಾವ ರೀತಿಯ ವಿಶೇಷ ಬಟ್ಟೆಗಳನ್ನು ಧರಿಸುತ್ತಾರೆ ಎಂಬ ಬಗ್ಗೆ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ವಿಡ್ ಮೂಲಕ ಮಾಹಿತಿ ನೀಡಿದೆ.
From first day of Chaitra Navratri, till Shri Ramnavami, the vastra of Bhagwan Shri Ramlalla Sarkar are going to be special.
Bhagwan will wear vastra made of special hand woven & hand spun khadi cotton, decorated with real gold khaddi (खड्डी) hand block print. The block prints… pic.twitter.com/hdUcqhoeS5
— Shri Ram Janmbhoomi Teerth Kshetra (@ShriRamTeerth) April 8, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.