ನವದೆಹಲಿ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆ ಭಾರತದ ಮೇಲೆ ಬ್ರಿಟಿಷ್ ಆಕ್ರಮಣದ ವಿರುದ್ಧ ನಡೆದ ಶಸ್ತ್ರಸಜ್ಜಿತ ಬಂಡಾಯವಾಗಿದೆ. ಇದನ್ನು ‘1857ರ ಭಾರತೀಯ ದಂಗೆ’ ಎಂದು ಬ್ರಿಟೀಷರು ಕರೆಯುತ್ತಾರೆ.
ಈ ಸಂಗ್ರಾಮದ ಪರಿಣಾಮವಾಗಿ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಆರಂಭವಾಯಿತು.
ದತ್ತು ಮಕ್ಕಳಿಗೆ ಹಕ್ಕಿಲ್ಲ ಮತ್ತು ಸಹಾಯಕ ಸೈನ್ಯ ಪದ್ಧತಿ ಮುಂತಾದ ಬ್ರಿಟಿಷರ ತಪ್ಪು ನೀತಿಗಳ ವಿರುದ್ಧ ಭಾರತೀಯರ ಅಸಮಾಧಾನವು ಆಕ್ರೋಶದ ರೂಪದಲ್ಲಿ ವ್ಯಕ್ತವಾಗಿ 1857ರ ಮೇ.10ರಿಂದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿತು. ಕೋಲ್ಕತ್ತಾ ಬಳಿಯ ಬರಾಕ್ಪುರದಿಂದ ಸಂಗ್ರಾಮ ಆರಂಭಗೊಂಡಿತು.
1857ರ ಮೇ ತಿಂಗಳಿನಲ್ಲಿ, ಬ್ರಿಟಿಷ್ “ಸ್ಥಳೀಯ ಸಿಪಾಯಿಗಳು” ಎಂದು ಕರೆಯಲ್ಪಟ್ಟ ಈಸ್ಟ್ ಇಂಡಿಯಾ ಕಂಪನಿಯ ಭಾರತೀಯ ಸೈನಿಕರು ದಂಗೆ ಎದ್ದರು. ಅಲ್ಲಿಂದ ದೇಶವ್ಯಾಪಿಯಾಗಿ ಸಂಗ್ರಾಮದ ಕಿಚ್ಚು ಹೊತ್ತಿಕೊಂಡಿತು. ಇದು 1859ರ ಜುಲೈ 8ರವರೆಗೆ ಮುಂದುವರೆಯಿತು. ಹೀಗಾಗಿ ಭಾರತದ ಇತಿಹಾಸದಲ್ಲಿ ಮೇ.10 ಮಹತ್ವದ ದಿನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.