ಮುಂಬಯಿ: ಚಲನಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮುಂಬರುವ ಫಿಲ್ಮ್ಫೇರ್ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದರೂ ಪ್ರಶಸ್ತಿ ಬೇಡ ಎಂದು ನಿರಾಕರಿಸಿದ್ದಾರೆ. ಅವರ ಚಲನಚಿತ್ರ ʼದಿ ಕಾಶ್ಮೀರ್ ಫೈಲ್ಸ್ʼ ಅತ್ಯುತ್ತಮ ನಿರ್ದೇಶಕ ಸೇರಿದಂತೆ ಏಳು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಆದರೆ ಪ್ರಶಸ್ತಿಗೆ ಅವರು ʼನೋʼ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ದಬ್ಬಾಳಿಕೆಯ ಮತ್ತು ಭ್ರಷ್ಟ ವ್ಯವಸ್ಥೆ ಅಥವಾ ಪ್ರಶಸ್ತಿಗಳ ಭಾಗವಾಗಲು ಬಯಸುವುದಿಲ್ಲ. ಈ ಭ್ರಷ್ಟ ವ್ಯವಸ್ಥೆಯು ಬರಹಗಾರರು, ನಿರ್ದೇಶಕರು ಮತ್ತು ಇತರ ಎಚ್ಒಡಿಗಳು ಮತ್ತು ಚಲನಚಿತ್ರದ ಸಿಬ್ಬಂದಿಯನ್ನು ತಾರೆಯರಿಗಿಂತ ಕೀಳು ಎಂದು ಪರಿಗಣಿಸುತ್ತದೆ” ಎಂದಿದ್ದಾರೆ.
2023 ರ ಫಿಲ್ಮ್ಫೇರ್ ನಾಮನಿರ್ದೇಶನಗಳ ಕುರಿತು ಟ್ವೀಟ್ಗೆ ಪ್ರತಿಕ್ರಿಯಿಸಿದ ವಿವೇಕ್, ಪ್ರಶಸ್ತಿಗಳನ್ನು ತೆಗಳಿ ದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ ಮತ್ತು ಹೊಸ ಸಮಾನಾಂತರ ಹಿಂದಿ ಚಲನಚಿತ್ರ ಉದ್ಯಮದ ಉದಯದ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ನ ಭ್ರಷ್ಟ, ಅನೈತಿಕತೆ ವಿರುದ್ಧ ನನ್ನ ಪ್ರತಿಭಟನೆಯ ಭಾಗವಾಗಿ ನಾನು ಪ್ರಶಸ್ತಿಗಳನ್ನು ಸ್ವೀಕರಿಸದಿರಲು ನಿರ್ಧರಿಸಿದೆ. ನಾನು ಯಾವುದೇ ದಬ್ಬಾಳಿಕೆ, ಭ್ರಷ್ಟ ವ್ಯವಸ್ಥೆ ಅಥವಾ ಪ್ರಶಸ್ತಿಗಳ ಭಾಗವಾಗಲು ನಿರಾಕರಿಸುತ್ತೇನೆ ಎಂದಿದ್ದಾರೆ.
ANNOUNCEMENT:
FILMFARE AWARDSI learnt from media that #TheKashmirFiles is nominated in 7 categories for the 68th Filmfare Awards. But I politely refuse to be part of these unethical and anti-cinema awards. Here is why:
According to Filmfare, other than the stars, nobody has… pic.twitter.com/2qKCiZ8Llh
— Vivek Ranjan Agnihotri (@vivekagnihotri) April 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.