ಬಾಯಾರು : ಅನಾಚಾರ ಹಾಗೂ ಅತ್ಯಾಚಾರಗಳ ವಿರುದ್ಧ ನಾವೆಲ್ಲಾ ಎದ್ದೇಳಬೇಕಾದ ಅನಿವಾರ್ಯತೆ ಇದೆ. ಹಿಂದುಗಳು ಸಹಿಷ್ಣುತೆಯನ್ನು ದುರ್ಬಲತೆ ಎಂದು ಯಾರೂ ತಿಳಿಯಬೇಕಾಗಿಲ್ಲ. ಅಗತ್ಯ ಬಂದಾಗ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ರಕ್ಷಣೆಗೆ ಎಂಥ ತ್ಯಾಗಕ್ಕೂ ನಾವು ಸಿದ್ಧರಾಗಿದ್ದೇವೆ ಎಂದು ಮಂಗಳೂರು ವಿಭಾಗ ಬಜರಂಗದಳ ಸಂಚಾಲಕರಾದ ಮುರಳೀಕೃಷ್ಣ ಹಂಸತ್ತಡ್ಕ ಹೇಳಿದರು.
ಅವರು ಕೇರಳದ ಕಣ್ಣೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಅವಹೇಳನ ಖಂಡಿಸಿ ವಿಶ್ವ ಹಿಂದು ಪರಿಷತ್ , ಬಜರಂಗದಳ ಮತ್ತು ಮಾತೃಮಂಡಳಿ ಪೈವಳಿಕೆ ಖಂಡ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆಯ ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಂತರ ಮಾತನಾಡಿದ ಬಿಲ್ಲವ ಸೇವಾ ಸಂಘ ಒಕ್ಕೂಟದ ಕಾಸರಗೋಡು ಜಿಲ್ಲಾ ಕಾರ್ಯದರ್ಶಿಯಾದ ಚಂದ್ರಹಾಸ ಕಡಂಬಾರು ಅವರು”ಮಾನವರೆಲ್ಲಾ ಒಂದೇ ಎಂದು ಸಾರಿದ ನಾರಾಯಣ ಗುರುವಿಗೆ ಮಾಡಿದ ಅಪಮಾನ ನಮ್ಮೆಲ್ಲರಿಗೂ ಮಾಡಿದ ಅಪಮಾನ. ಇದಕ್ಕೆ ನಮ್ಮ ವಿರೋಧವಿದೆ. ಇಂತಹ ಘಟನೆಗಳು ನಿಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಹಿಂಪದ ಅನೇಕ ಹಿರಿಯರಾದ ಬಾಯಾಡಿ ವೆಂಕಟರಮಣ ಭಟ್, ಯು.ಶಂಕರ ಭಟ್, ಅಂಗಾರ ಶ್ರೀಪಾದ, ದಿನೇಶ್ ಚೆರುಗೋಳಿ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.