News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಾಕಿ ವಿಶ್ವಕಪ್ ಟ್ರೋಫಿ ನವದೆಹಲಿಯಲ್ಲಿ ಅನಾವರಣ

ನವದೆಹಲಿ: ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಇಂದು ಹಾಕಿ ವಿಶ್ವಕಪ್ ಟ್ರೋಫಿಯನ್ನು ನವದೆಹಲಿಯಲ್ಲಿ ಅನಾವರಣಗೊಳಿಸಿದರು.

ಹಾಕಿ ವಿಶ್ವಕಪ್ ಟ್ರೋಫಿ 2023  ಇಂದು ರಾಷ್ಟ್ರ ರಾಜಧಾನಿಯ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣಕ್ಕೆ ಆಗಮಿಸಿದ್ದು, ನಂತರ ಅದನ್ನು ಹಾಕಿ ಅಭಿಮಾನಿಗಳ ಮುಂದೆ ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಠಾಕೂರ್, FIH ಹಾಕಿ ಪುರುಷರ ವಿಶ್ವಕಪ್ 2023 ಟ್ರೋಫಿಯನ್ನು ದೇಶದ ವಿವಿಧ ನಗರಗಳಿಗೆ ಕೊಂಡೊಯ್ಯುವುದು ಹಾಕಿ ಪ್ರಚಾರ ಮಾಡಲು ಉತ್ತಮ ಮಾರ್ಗವಾಗಿದೆ. ದೇಶದ ವಿವಿಧ ಭಾಗಗಳಾದ ಒಡಿಶಾ, ಉತ್ತರ ಪ್ರದೇಶ, ಜಾರ್ಖಂಡ್, ಪಂಜಾಬ್ ಮತ್ತು ಈಗ ನವದೆಹಲಿಯಲ್ಲಿ ಹಾಕಿ ದಿಗ್ಗಜರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ಟ್ರೋಫಿ ಪ್ರಯಾಣಿಸಿದೆ ಎಂದು ಅವರು ಮಾಹಿತಿ ನೀಡಿದರು.

ಒಲಿಂಪಿಕ್ಸ್ ನಂತರ ವಿಶ್ವಕಪ್ ಹಾಕಿಯ ಅತಿದೊಡ್ಡ ಸ್ಪರ್ಧೆಯಾಗಿದೆ ಮತ್ತು ಅದನ್ನು ಉತ್ತೇಜಿಸಲು ನಾವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು  ಠಾಕೂರ್ ಹೇಳಿದರು.

FIH ಹಾಕಿ ಪುರುಷರ ವಿಶ್ವಕಪ್ 2023 ಮುಂದಿನ ವರ್ಷ ಜನವರಿ 13 ರಿಂದ ಪ್ರಾರಂಭವಾಗುತ್ತದೆ. ಡಿಸೆಂಬರ್ 25 ರಂದು ಒಡಿಶಾಗೆ ಹಿಂದಿರುಗುವ ಮೊದಲು ಟ್ರೋಫಿಯು 13 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಾದ್ಯಂತ ಪ್ರಯಾಣಿಸುತ್ತದೆ, ಹೀಗಾಗಿ ವಿಜೇತ ತಂಡವು ಜನವರಿ 29 ರಂದು ಅದನ್ನು ಎತ್ತುವ ಮೊದಲು ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಪ್ರತಿಷ್ಠಿತ ಟ್ರೋಫಿಯೊಂದಿಗೆ ತೊಡಗಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ.

ರಾಷ್ಟ್ರವ್ಯಾಪಿ ಟ್ರೋಫಿ ಟೂರ್ ಅನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಡಿಸೆಂಬರ್ 5 ರಂದು ಭುವನೇಶ್ವರದಲ್ಲಿ ಪ್ರಾರಂಭಿಸಿದರು.

1975 ರ ವಿಶ್ವಕಪ್ ವಿಜೇತರಾದ  ಅಜಿತ್ ಪಾಲ್ ಸಿಂಗ್, ಅಶೋಕ್ ಧ್ಯಾನಚಂದ್, ಬ್ರಿಗ್ ಎಚ್‌ಜೆಎಸ್ ಚಿಮ್ನಿ, ಮತ್ತು ಮಾಜಿ ಒಲಿಂಪಿಯನ್‌ಗಳಾದ ಹರ್ಬಿಂದರ್ ಸಿಂಗ್, ಪದ್ಮಾ,  ಜಾಫರ್ ಇಕ್ಬಾಲ್ ಮತ್ತು ವಿನಿತ್ ಕುಮಾರ್ ಇತರ ಗಣ್ಯರು ಇದರಲ್ಲಿ ಭಾಗಿಯಾಗಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top