ನವದೆಹಲಿ: ತಾಲಿಬಾನ್ ಆಡಳಿತ ಬಂದ ಬಳಿಕ ಅಫ್ಘಾನಿಸ್ತಾನವು ಬೃಹತ್ ಮಾದಕ ದ್ರವ್ಯ ಕೇಂದ್ರವಾಗಿ ಮಾರ್ಪಟ್ಟಿದೆ ಮತ್ತು ಇದೀಗ ಭಾರತದ ಮೇಲೂ ಅದರ ಪ್ರಭಾವ ಬೀರಲು ಆರಂಭಿಸಿದೆ. ದೆಹಲಿ ಪೊಲೀಸ್ ವಿಶೇಷ ಘಟಕ ನಡೆಸಿದ ಕಾರ್ಯಾಚರಣೆಯಲ್ಲಿ, ಇಬ್ಬರು ಅಫ್ಘಾನಿಸ್ತಾನ ಪ್ರಜೆಗಳನ್ನು ಅಪಾರ ಪ್ರಮಾಣದ ಮಾದವ ದ್ರವ್ಯ methamphetamine ಜೊತೆ ಬಂಧನಕ್ಕೊಳಪಡಿಸಲಾಗಿದೆ.
ಅಫ್ಘಾನಿಸ್ತಾನದಿಂದ ಬಂದ ಡ್ರಗ್ಸ್ ಅನ್ನು ಭೇದಿಸುವುದು ಹೊಸ ವಿಷಯವೇನಲ್ಲ. ಈ ಹಿಂದೆ ದೆಹಲಿ ಪೊಲೀಸರು ಭಾರೀ ಪ್ರಮಾಣದ ಹೆರಾಯಿನ್ಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಪೊಲೀಸ್ ಏಜೆನ್ಸಿ ಅಫ್ಘಾನಿಸ್ತಾನ ಮೂಲದ methamphetamine ಅನ್ನು ವಶಪಡಿಸಿಕೊಂಡಿದ್ದು ಇದೇ ಮೊದಲು, 312.5 ಕೆಜಿ ತೂಕದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1,200 ಕೋಟಿ ರೂ.ಮೌಲ್ಯದ ಡ್ರಗ್ ಇದಾಗಿದೆ.
ಮೆಥಾಂಫೆಟಮೈನ್ ಅನ್ನು ಉತ್ಪಾದಿಸಲು ಬಳಸುವ ಎಫೆಡ್ರೆನ್ ಎಂಬ ರಾಸಾಯನಿಕವನ್ನು ತಯಾರಿಸಲು ಅಫ್ಘಾನ್ ಡ್ರಗ್ ಲಾರ್ಡ್ಗಳು ಸ್ಥಳೀಯವಾಗಿ ಕಾಣಸಿಗುವ ಪೊದೆಸಸ್ಯ ಎಫೆಡ್ರಾ ಬಳಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಅಲ್ಲಿ ಹಿಂದೆ ಓಮನ್ ಅಥವಾ ಬಂದಾಕ್ ಎಂದು ಕರೆಯಲ್ಪಡುವ ಎಫೆಡ್ರಾ ಕೃಷಿಯ ಮೇಲೆ ನಿಷೇಧ ಹೇರಲಾಗಿತ್ತು. ಆದರೀಗ ತಾಲಿಬಾನ್ ಆಡಳಿತದಲ್ಲಿ ಎಗ್ಗಿಲ್ಲದೆ ಇವುಗಳನ್ನು ಬೆಳೆಯಲಾಗುತ್ತಿದೆ ಎನ್ನಲಾಗಿದೆ.
In a major crackdown, Spl Cell has busted a transnational synthetic drug cartel; 2 Afghan Nationals nabbed. Highest ever seizure of 312.5 kg party drug methamphetamine & 10 kg high purity heroin; worth ₹1200Cr in international mkt. Luxury cars also seized. @CellDelhi pic.twitter.com/iPZjsgzx0k
— Delhi Police (@DelhiPolice) September 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.