ನವದೆಹಲಿ: ಮುಂದಿನ ಮೂರು-ನಾಲ್ಕು ತಿಂಗಳುಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (ಇವಿ) ಬ್ಯಾಟರಿ ವಿನಿಮಯ ನೀತಿಯನ್ನು ನೀತಿ ಆಯೋಗ ರೂಪಿಸಲಿದೆ ಎಂದು ಮೂಲಗಳು ವರದಿ ಮಾಡಿವೆ.
ಎಲೆಕ್ಟ್ರಿಕ್ ವಾಹನ ಮಾಲೀಕರು ಕಡ್ಡಾಯವಾಗಿ ಬ್ಯಾಟರಿಯನ್ನು ಹೊಂದಿರಬೇಕಾಗಿಲ್ಲ. ಗುತ್ತಿಗೆ ಇತ್ಯಾದಿಗಳ ಮೂಲಕವೂ ಬ್ಯಾಟರಿ ಪಡೆಯಬಹುದಾಗಿದೆ. ಈ ಬಗ್ಗೆ ನೀತಿಯಲ್ಲಿ ಸ್ಪಷ್ಟ ಅಂಶಗಳು ಇರಲಿವೆ.
ಒಟ್ಟು ವಾಹನ ವೆಚ್ಚದಲ್ಲಿ ಬ್ಯಾಟರಿಗಳ ವೆಚ್ಚ ಶೇಕಡಾ 50 ರಷ್ಟಿದೆ. ಈ ನೀತಿ ಎಲೆಕ್ಟ್ರಿಕ್ ವಾಹನಗಳ ಮುಂಗಡ ವೆಚ್ಚವನ್ನು ಕಡಿಮೆ ಮಾಡುತ್ತದೆ.
ಕೆಲವು ನಿಮಿಷಗಳಲ್ಲಿ ನಿರ್ದಿಷ್ಟ ನಿಲ್ದಾಣಗಳಲ್ಲಿ ತಮ್ಮ ಬ್ಯಾಟರಿಗಳನ್ನು ವಿನಿಮಯ ಮಾಡಿಕೊಳ್ಳಲು ಇದು ಎಲೆಕ್ಟ್ರಿಕ್ ವಾಹನ ಮಾಲೀಕರಿಗೆ ಅನುವು ಮಾಡಿಕೊಡುತ್ತದೆ. ನಂತರ ಅವರು ತಮ್ಮ ಮನೆಯಲ್ಲಿಯೇ ಬ್ಯಾಟರಿಗಳನ್ನು ಚಾರ್ಜ್ ಮಾಡಬಹುದು.
“ಸಮೀಪ ಭವಿಷ್ಯದಲ್ಲಿ ICE ಎಂಜಿನ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳು ಅಗ್ಗವಾಗಲಿದೆ ಎಂದು ನನಗೆ ವಿಶ್ವಾಸವಿದೆ” ಎಂದು ನೀತಿ ಆಯೋಗದ ಸಿಇಒ ಮತ್ತು ಹಿರಿಯ ಅಧಿಕಾರಿ ಅಮಿತಾಬ್ ಕಾಂತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.