ಬೆಳ್ತಂಗಡಿ : ಸಮಾಜದ ಕಟ್ಟಕಡೆಯ ಸಮುದಾಯ ಮುಖ್ಯವಾಹಿನಿಗೆ ಬಂದು ಜನರಧ್ವನಿಯಾಗಬೇಕೆನ್ನುವುದೇ ಗ್ರಾಮಪಂಚಾಯತ್ ಅಧಿಕಾರ ವಿಕೇಂದ್ರೀಕರಣದ ಉದ್ದೇಶ,ಇದೇ ಕಾರಣಕ್ಕಾಗಿ ನಜೀರ್ಸಾಬ್ ಗ್ರಾಮ ಪಂಚಾಯತ್ಗಳು ಹಳ್ಳಿಯ ವಿಧಾನಸಭೆ ಎಂದು ಕರೆದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯವಿಲ್ಲದ, ಕುಡಿಯುವ ನೀರಿಲ್ಲದ ವಿದ್ಯುತ್ ಇಲ್ಲದ ಮನೆಗಳು ಇರದಂತೆ ಆಡಳಿತ ನಡೆಸಿ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಈಚೆಗೆ ಬಂದಾರು ಗ್ರಾ ಪಂ ಅಧ್ಯಕ್ಷ ಉದಯ ಬಿ.ಕೆ.ಅಧ್ಯಕ್ಷತೆಯಲ್ಲಿ ಬಿ.ಜೆ.ಪಿ.ಗ್ರಾಮಸಮಿತಿ ಬಂದಾರುಇದರ ವತಿಯಿಂದ ವಿಷ್ಣುಮೂರ್ತಿದೇವಸ್ಥಾನ ವಠಾರದಲ್ಲಿ ನಡೆದ ಸರಕಾರದ ವಿವಿಧ ಇಲಾಖಾ ಯೋಜನೆ ಹಾಗೂ ಸೌಲಭ್ಯಗಳ ಮಾಹಿತಿ, ಗ್ರಾಮೀಣ ಉದ್ಯಮ ಶೀಲತಾ-ಸ್ವಾಉದ್ಯೋಗ ಸಾಲ ಸಹಾಯಧನ, ತರಬೇತಿಗಳ ಮಾಹಿತಿ, ಅರ್ಜಿ ಫಾರಂ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯತ್ ಆಡಳಿತ ಅಜೆಂಡಾ ಪ್ರಕಾರ ಕೆಲಸ ಮಾಡುವಾಗ ನಿಯಮಗಳನ್ನು ಪಾಲಿಸಿ,ಯೋಜನೆಗಳು ಜನಪರ ಹಾಗೂ ಪಾರದರ್ಶಕವಾಗಿರಲಿ, ಆಡಳಿತ ಭ್ರಷ್ಟಾಚಾರ ಮುಕ್ತವಾಗಿರಲಿ, ಯಾವುದೇ ಸೌಲಭ್ಯಗಳು ಅರ್ಹರಿಗೆ ಬಡವರಿಗೆ ನೀಡಿ ಸಾಮಾಜಿಕ ನ್ಯಾಯವನ್ನು ಕಾಪಾಡಿ ಏಕೆಂದರೆ ಗ್ರಾಮಪಂಚಾಯತ್ ಅಥವಾ ಗ್ರಾಮಸಭೆಗಳಿರುವುದು ರಾಜಕೀಯ ಜಗಳಕ್ಕಲ್ಲ, ಗ್ರಾಮದ ಅಭಿವೃದ್ಧಿಗಾಗಿ ಎಂದು ಕೋಟ ಶ್ರೀನಿವಾಸಪೂಜಾರಿ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಆಶಾ ತಿಮ್ಮಪ್ಪ ಗೌಡ,ತಾ.ಪಂ.ಸದಸ್ಯೆ ಗೀತಾ ರಾಮಣ್ಣಗೌಡ, ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ, ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್ ಮುಖ್ಯತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ವಿಶೇಷ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜಿ.ಪಂ.ಮಾಜಿಅಧ್ಯಕ್ಷ ಕೊರಗಪ್ಪ ನಾಯ್ಕ, ರುಡ್ಸೆಟ್ ಉಪನ್ಯಾಸಕ ಅಬ್ರಹಾಂ ಜೇಮ್ಸ್, ಗ್ರಾಮೋತ್ಥಾನ ಇಂಡಿಯಾ ಫೌಂಡೇಶನ್ ವ್ಯವಸ್ಥಾಪಕಕೆ.ಆರ್.ಚಂದ್ರಶೇಖರ್ ಮತ್ತಿತರರು ಭಾಗವಹಿಸಿದರು. ಎಪಿಎಂಸಿ ಸದಸ್ಯ ಹೊನ್ನಪ್ಪಗೌಡ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಾಜೀವರೈ, ಸೀತಾರಾಮ ನಾಯ್ಕ ಬೆಳಾಲು ಹಾಗೂ ಗ್ರಾ ಪಂ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ 80% ಅಂಕಗಳನ್ನು ಪಡೆದ ಹಾಗೂ ಕ್ರೀಡಾ ಸಾಧನೆಗೈದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕ ನಾರಾಯಣಗೌಡ ಮುಚ್ಚೂರು ಕಾರ್ಯಕ್ರಮ ನಿರೂಪಿಸಿದರು. ಉದಯ ಭಟ್ ಕೆ.ಸ್ವಾಗತಿಸಿದರು. ಉಮೇಶ್ಅಂಗಡಿ ಮಜಲು ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.