ಭಾರತ ಒಂದು ಪ್ರಜಾಪ್ರಭುತ್ವ ದೇಶ. ಇಲ್ಲಿ ಚುನಾವಣೆ ಎನ್ನುವುದು ಅತ್ಯಂತ ಪ್ರಮುಖ ವ್ಯವಸ್ಥೆ. ರಾಜಕೀಯ ಪಕ್ಷಗಳ ನೀತಿಗೆ ಸಿಕ್ಕ ಜನಾದೇಶವನ್ನು ಪರೀಕ್ಷಿಸುವ ನಿಟ್ಟಿನಲ್ಲೂ ಚುನಾವಣೆ ಅತಿ ಪ್ರಮುಖವಾದುದು. ಜನಾದೇಶ ಹೊಸ ಸಂಭವನೀಯತೆಗಳು ಮತ್ತು ಹೊಸ ಮುಖಗಳಿಗೆ ಅವಕಾಶಗಳನ್ನು ಅನುವು ಮಾಡಿಕೊಡುತ್ತದೆ. ಸರಕಾರದಲ್ಲಿನ ಬದಲಾವಣೆಗಳು ಕೂಡ ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಮತ್ತು ಸಂಪರ್ಕವನ್ನು ಹೊಂದಿರುವುದು ಕೂಡ ಅತಿ ಮುಖ್ಯವಾಗುತ್ತದೆ.
ನಿರಂತರವಾಗಿ ಜನರಿಂದ ಆಯ್ಕೆಯಾದ ಪಕ್ಷವೊಂದು ತನ್ನೊಳಗಿನ ಹೊಸಮುಖಗಳನ್ನು ಮತ್ತು ಹೊಸ ಅವಕಾಶಗಳನ್ನು ಹೇಗೆ ಅರಿತುಕೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ. ಹೊಸ ಮುಖಗಳಿಗೆ ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಪಕ್ಷ ತೆಗೆದುಕೊಳ್ಳುವ ನಿಲುವು ಮುಖ್ಯವಾಗುತ್ತದೆ.
ಈ ವಿಷಯದಲ್ಲಿ ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನ. ಆರಂಭದಿಂದಲೂ ಈ ಪಕ್ಷ ರಾಜಕೀಯದಲ್ಲಿ ಹೊಸ ಸಂಭವನೀಯತೆಗಳನ್ನು ಸಂಘಟನಾತ್ಮಕ ರೀತಿಯಲ್ಲಿ ಪರೀಕ್ಷಿಸುವ ಪ್ರಯತ್ನ ನಡೆಸಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣವನ್ನು ಖಚಿತಪಡಿಸುವ ಗುರಿಯೊಂದಿಗೆ ಆರಂಭಗೊಂಡ ಬಿಜೆಪಿ ಕೇವಲ ಮಾತಿನಲ್ಲಿ ಮಾತ್ರವಲ್ಲದೆ ತನ್ನ ಕಾರ್ಯದಿಂದಲ್ಲೂ ತನ್ನ ಸಿದ್ಧಾಂತಕ್ಕೆ ಬದ್ಧತೆಯನ್ನು ತೋರಿಸಿದೆ.
ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸುವ ಮೂಲಕ ಈ ಪಕ್ಷದ ಪ್ರತಿನಿಧಿಗಳು ರಾಷ್ಟ್ರಕ್ಕಾಗಿನ ತಮ್ಮ ಸಮರ್ಪಣೆಯನ್ನು ತೋರಿಸಿದ್ದಾರೆ, ಮಾತ್ರವಲ್ಲದೆ ಬೃಹತ್ ಮಟ್ಟದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲೂ ಕೊಡುಗೆ ನೀಡಿದ್ದಾರೆ. ಹಲವು ಚಳವಳಿಗಳ ಭಾಗವಾಗಿರುವ ಬಿಜೆಪಿ ಇಂದು ಅಧಿಕಾರದಲ್ಲಿದೆ ಮತ್ತು ಉತ್ತಮ ಆಡಳಿತಕ್ಕಾಗಿ ಅವಿರತ ಶ್ರಮಿಸುತ್ತಿದೆ.
ಭಿನ್ನತೆಗಳ ಪಕ್ಷ ಎಂದು ಬಿಜೆಪಿ ತನ್ನನ್ನು ಸಾಬೀತು ಮಾಡಿಕೊಂಡಿದೆ. ಇತರ ಪಕ್ಷಗಳಿಗಿಂತ ಭಿನ್ನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆ ಪಕ್ಷದ ರಚನೆಯಲ್ಲೇ ಕುಟುಂಬ ರಾಜಕೀಯದ ವಿರುದ್ಧದ ಹೋರಾಟ ಎದ್ದು ಕಾಣುತ್ತಿದೆ. ಇತರ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಹೆಣಗಾಟ ನಡೆಸುತ್ತಿರುವಾಗ, ಬಿಜೆಪಿ ತನ್ನ ಪಕ್ಷವನ್ನು ಕಾರ್ಯಕರ್ತ ಕೇಂದ್ರಿತ ಮತ್ತು ಸಿದ್ಧಾಂತ ಆಧಾರಿತವಾಗಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತರ ಪಕ್ಷಗಳ ಹಾಲ್ಮಾರ್ಕ್ ಆಗಿರುವ ಕುಟುಂಬ ರಾಜಕಾರಣದಿಂದ ತನ್ನನ್ನು ದೂರ ಇಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯ ಸಾಧಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾರ್ಯಕರ್ತರ ಸಾಮರ್ಥ್ಯ ವೃದ್ಧಿಯಲ್ಲೂ ಪಕ್ಷ ಯಶ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕನ ನೇತೃತ್ವದಲ್ಲಿ ಬಿಜೆಪಿ ಕಾರ್ಯನಿರ್ವಹಿಸುತ್ತಿರುವುದರಿಂದ ಇದು ಸಾಧ್ಯವಾಗಿದೆ.
ರಾಜಕೀಯ ಪಕ್ಷವು ಸಾರ್ವಜನಿಕ ಸಂವಹನ, ಸಂವೇದನಾಶೀಲತೆ, ತಳಮಟ್ಟದ ಅರ್ಥೈಸುವಿಕೆ, ನೀತಿಗಳ ಅನುಷ್ಠಾನಗೊಳಿಸುವಿಕೆ, ಸಾರ್ವಜನಿಕ ಜನಾದೇಶವನ್ನು ಗೌರವಿಸುವಂತಹ ಗುಣಗಳನ್ನು ಹೊಂದಿರಬೇಕು. ಹೊಸ ಮತ್ತು ವಾಸ್ತವಿಕ ನೀತಿಗಳು ಕಾರ್ಯಾಂಗ ಮತ್ತು ಆಡಳಿತದ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಬಲ್ಲದು. ಎರಡರ ನಡುವಿನ ಅಂತರವನ್ನು ಸರಿದೂಗಿಸಲು ಸ್ಪಷ್ಟ ನೀತಿಗಳು ಮತ್ತು ಬಲಿಷ್ಠ ನಾಯಕತ್ವ ಇರುವುದು ಅತಿಮುಖ್ಯ. ಬಿಜೆಪಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಪ್ರಯತ್ನ ಮಾಡಿದೆ. ದೀರ್ಘ ಸಮಯದಿಂದ ಜನರ ಭರವಸೆಯನ್ನು ಪಡೆಯುತ್ತಿರುವ ಪಕ್ಷವೊಂದು ಆಂತರಿಕ ಬದಲಾವಣೆಗಳನ್ನು ತರುತ್ತಿರುವುದು ಸ್ವಾಭಾವಿಕ.
ತನ್ನ ಕಾರ್ಯಕರ್ತರಲ್ಲಿ ಸಾಮರ್ಥ್ಯ ವೃದ್ಧಿಸಲು ಪಕ್ಷವೊಂದು ಬಯಸುವುದೇ ಆದರೆ ಅದು ನಾಯಕತ್ವದ ಮಟ್ಟದಿಂದಲೇ ಸಾಧ್ಯವಾಗಬೇಕು. ಯಾವಾಗ ಹೊಸ ವ್ಯಕ್ತಿ ಜವಾಬ್ದಾರಿಗಳನ್ನು ಪಡೆಯುತ್ತಾನೆಯೋ ಆತ ತನ್ನ ಕರ್ತವ್ಯಗಳನ್ನು ಉನ್ನತ ಸಮರ್ಪಣೆಯೊಂದಿಗೆ ಮತ್ತು ಹೊಸ ಉಲ್ಲಾಸದೊಂದಿಗೆ ಈಡೇರಿಸಲು ಮುಂದಾಗುತ್ತಾನೆ. ಇದೇ ವೇಳೆ, ದೀರ್ಘ ಸಮಯದಿಂದ ಅಧಿಕಾರದಿಂದ ಹೊರಗುಳಿದು ನಂತರ ಅಧಿಕಾರಕ್ಕೆ ಮರಳುವ ವ್ಯಕ್ತಿ ಕೂಡ ತನ್ನ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಪ್ರಯತ್ನ ಪಡುತ್ತಾನೆ. ಈ ಪ್ರಯೋಗವನ್ನು ಬೃಹತ್ ಮಟ್ಟದಲ್ಲಿ ಪಕ್ಷಗಳು ಒಪ್ಪಿಕೊಳ್ಳಬೇಕು. ರಾಜಕೀಯ ಪಕ್ಷಗಳು ಯಾವುದೇ ವ್ಯಕ್ತಿ ಅಥವಾ ಕುಟುಂಬದ ಆಸ್ತಿಯಲ್ಲ, ಹೀಗಾಗಿ ಜನಸ್ನೇಹಿ ಪ್ರಯೋಗಗಳನ್ನು ಅಳವಡಿಸಬೇಕು. ಹೊಸ ಚಿಂತನೆಗಳು ಸ್ವೀಕರಿಸಲ್ಪಡಬೇಕು, ಅಂತಹ ಪ್ರಯೋಗಗಳನ್ನು ನಾವು ಸ್ವಾಗತಿಸಬೇಕು.
ಪಕ್ಷದ ಸಂಘಟನೆಯ ಅಡಿಪಾಯ ಅದರ ಸಿದ್ಧಾಂತದ ಮೇಲೆ ಆಧಾರಿತವಾಗದೆ, ಕುಟುಂಬ ಆಧಾರಿತವಾದರೆ ಅವನತಿಗೆ ದಾರಿ ಮಾಡಿಕೊಡುತ್ತದೆ. ಸಿದ್ಧಾಂತಕ್ಕೆ ಬದ್ಧರಾಗಿರುವ ಕಾರ್ಯಕರ್ತರು ಬದಲಾವಣೆಗಳಿಗೆ ಒಗ್ಗಿಕೊಳ್ಳುತ್ತಾರೆ ಮತ್ತು ತಮ್ಮ ಕರ್ತವ್ಯಗಳನ್ನು ಮುಂದುವರೆಸುತ್ತಾರೆ. ಆದರೆ ಕುಟುಂಬ ರಾಜಕಾರಣದಲ್ಲಿ ಸಂಘಟನಾತ್ಮಕ ಬದಲಾವಣೆಗಳು ಆಂತರಿಕ ಅಧಿಕಾರದ ಗುದ್ದಾಟಕ್ಕೆ ಕಾರಣವಾಗುತ್ತದೆ.
ಬಿಜೆಪಿ ಪಕ್ಷದಲ್ಲಿ ಬದಲಾವಣೆ ಒಂದು ಸ್ವಾಭಾವಿಕ ಪ್ರಕ್ರಿಯೆ. ಇಲ್ಲಿ ಬದಲಾವಣೆಗಳು ಗದ್ದಲವನ್ನು ಸೃಷ್ಟಿಸುವುದಿಲ್ಲ. ಹೊಸ ಅಗತ್ಯತೆಗಳು, ಹೊಸ ಚಿಂತನೆಗಳು, ಹೊಸ ಮುಖಗಳಿಗೆ ಅವಕಾಶಗಳನ್ನು ನೀಡುವ ಅಗತ್ಯತೆ, ಹೊಸ ಉತ್ಸಾಹದೊಂದಿಗೆ ಮುನ್ನಡೆಯುವ ಇರಾದೆ, ಸಂಘಟನೆ ಮತ್ತು ಸರ್ಕಾರದ ಮಟ್ಟದಲ್ಲಿ ಕರ್ತವ್ಯಗಳನ್ನು ಪಾಲಿಸುವ ಸಲುವಾಗಿ ಬಿಜೆಪಿಯಲ್ಲಿ ಬದಲಾವಣೆಗಳನ್ನು ಸ್ವೀಕರಿಸಲಾಗುತ್ತದೆ. ಇದು ಬಿಜೆಪಿಯ ಸಕಾರಾತ್ಮಕ ಕಾರ್ಯದ ಕಾರ್ಯಸೂಚಿಯ ಭಾಗವಾಗಿದೆ, ಇದನ್ನು ಅದರ ಎಲ್ಲಾ ಕಾರ್ಯಕರ್ತರು ಕೂಡ ಸಮಾನಮನಸ್ಕರಾಗಿ ಒಪ್ಪಿಕೊಳ್ಳುತ್ತಾರೆ.
ಮೂಲ ಲೇಖನ: ಕೇಂದ್ರ ಸಚಿವ ಭೂಪೇಂದ್ರ ಯಾದವ್
ಕೃಪೆ : indianexpress.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.