ಉಡುಪಿ : ಗ್ರಾಮೀಣ ಭಾಗದ ಯುವತಿಯರಿಗೆ ಹದಿ ಹರೆಯವನ್ನು ದಾಟುವದೇ ಒಂದು ಸವಾಲು. ಗ್ರಾಮೀಣ ಭಾಗದ ಹದಿ ಹರೆಯದ ಯುವತಿಯರ ಆರೋಗ್ಯ ಮತ್ತು ಸ್ವಚ್ಚತೆಯನ್ನು ಗಮನದಲ್ಲಿಟ್ಟು, ಮಣಿಪಾಲದ ಟ್ಯಾಪ್ತಿ ಶಿಕ್ಷಣ ಸಂಸ್ಥೆ ವಿನೂತನ ಯೋಜನೆಯೊಂದು ಪ್ರಾಂಭಿಸಿದೆ.
ಇಲ್ಲಿ ಕೆಲಸದಲ್ಲಿ ನಿರತರಾದವರು ಉಡುಪಿಯ ಮಣಿಪಾಲ ಸಮೀಪದ ಪರ್ಕಳದ ಸ್ವ ಸಹಾಯ ಗುಂಪಿನ ಮಹಿಳೆಯರು. ಪರ್ಕಳದ ಮನೆಯೋಂದರಲ್ಲಿ ಇವರೆಲ್ಲ ಸೇರಿ ಮಾಡುವ ಕೆಲಸದ ಹಿಂದೆ ಮಾತ್ರ ಒಂದು ಮಹಾನ್ ಉದ್ದೇಶವಿದೆ. ಅದು ಹದಿ ಹರೆಯದ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶುಚಿತ್ವ ಬಗೆಗಿನ ಜಾಗ್ರತಿ. ಮಣಿಪಾಲದ ಟ್ಯಾಪ್ತಿ ಸಂಸ್ಥೆ ಇಂತಹದೋಂದು ಯೋಜನೆಯನ್ನು ರೂಪಿಸಿದ್ದು, ಅದೀಗ ಕಾರ್ಯಗತ ಗೋಳ್ಳುತ್ತಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕೀನ ಪೂರೈಸುವದಲ್ಲದೇ ಸರಿಯಾದ ವಿಧಾನದ ಬಳಕೆ ಮತ್ತು ಶುಚುತ್ವ ಕಾಪಾಡುವದರ ಬಗ್ಗೆ ಜಾಗ್ರತಿ ಮೂಡಿಸುವದು ಇವರ ಉದ್ದೇವಾಗಿದೆ. ಇನ್ನು ಕೆಲವೆಡೆ ಕಡಿಮೆ ಬೆಲೆಯಲ್ಲಿ ಇದನ್ನು ಮಾರಾಟ ಕೂಡಾ ಮಾಡುತ್ತಿದ್ದಾರೆ…
ಹದಿ ಹರೆಯದ ಹೆಣ್ಣು ಮಕ್ಕಳ ಜಾಗ್ರತಿ ಕಾರ್ಯವನ್ನು ಸರ್ಕಾರ ಅಥವಾ ಎನ್.ಜಿ.ಒ ನಡೆಸುತ್ತಾರೆ. ಆದರೆ ಇಲ್ಲಿ ಟ್ಯಾಪ್ತಿ ಸಂಸ್ಥೆ ಸ್ವಂತ ಆಸಕ್ತಿಯಿಂದ ಈ ಯೋಜನೆ ಆರಂಭಿಸಿದೆ. ಅದರಲ್ಲೂ ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ದುಡಿಮೆಗೂ ಒಂದು ಅವಕಾಶ ಸಿಗುತ್ತದೆ. ಗುಡಿ ಕೈಗಾರಿಕೆಯ ರೀತಿಯಲ್ಲಿ ನ್ಯಾಪ್ಕೀನ ಗಳನ್ನು ತಯಾರಿಸುವ ಇವರು. ಶಾಲಾ ಕಾಲೇಜುಗಳಿಗೆ ತೆರಳಿ ಅವನ್ನು ಪ್ರೌಡ ವಯ್ಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಇದರ ಕುರಿತು ತೀಳಿ ಹೇಳಿ ಇದನ್ನು ಕೋಡುತ್ತಾರೆ. ನಗರ ಪ್ರದೇಶ ಹೆಣ್ಣು ಮಕ್ಕಳು ಆಧುನಿಕ ಪ್ರಪಂಚದೋಂದಿಗೆ ತಾವೂ ಆತ್ಮ ವಿಶ್ವಾಸ ಪಡೆದುಕೋಳ್ಳ ಬಲ್ಲವರಾಗಿದ್ದಾರೆ, ಆದರೆ ಗ್ರಾಮೀಣ ಹದಿ ಹರೆಯದ ಹೆಣ್ಣು ಮಕ್ಕಳ ಈ ವಯ್ಯಸ್ಸಿನಲ್ಲಿ ಬಡತನ, ಮುಜುಗರ ಮತ್ತು ಕೀಳುರಿಮೆಯಿಂದ ಬಳಲುವ ಸಾದ್ಯತೆ ಇದೆ. ಹೀಗಾಗಿ ಶಾಲೆಗಳಲ್ಲಿ ಆರೋಗ್ಯ ಮತ್ತು ಶುಚಿತ್ವದ ಕುರಿತು ತರಬೇತಿ ಪಡೆದ ಸಿಬ್ಬಂದಿಯಿಂದ ಪ್ರೌಡಾವಸ್ತೆಯ ಮಹಿಳರಯರಿಗೆ ತಿಳಿ ಹೇಳುತ್ತಿದ್ದಾರೆ. ಈ ಕಾರ್ಯಕ್ಕೆ ನುರಿತ ವೈದ್ಯರುಗಳೂ ಕೂಡಾ ಕೈ ಜೋಡಿಸಿದ್ದಾರೆ. ಇಷ್ಟೇ ಅಲ್ಲದೇ ಇವರು ತಯಾರಿಸಿದ ನ್ಯಾಪ್ಕಿನ ಗೆ ಈಗ ಮಾರು ಕಟ್ಟೆಯಲ್ಲಿ ಕೂಡಾ ಬಹಳಷ್ಟು ಬೇಡಿಕೆ ಬಂದಿದೆ…
ಸದ್ಯಕ್ಕೆ ಈ ಯೋಜನೆಯ ಮೂಲಕ ಪ್ರತೀ ಶಾಲೆಯ 150 ಪ್ರೌಡ ಹೆಣ್ಣು ಮಕ್ಕಳನ್ನು ಜಾಗ್ರತಿ ಮೂಡಿಸುವ ಉದ್ದೇಶ ಇಟ್ಟುಕೋಳ್ಳಲಾಗಿದೆ. ಈ ಜಾಗ್ರತಿ ಯೋಜನೆ ಉಡುಪಿಯಲ್ಲಿ ಪ್ರಾರಂಭಗೋಂಡಿದ್ದು ಮುಂದೆ ರಾಜ್ಯದ ಉದ್ದ ಅಗಲಕ್ಕೂ ವಿಸ್ತರಿಸುವ ಯೋಜನೆ ಟ್ಯಾಪ್ಮೀ ಸಂಸ್ಥೆಯದು…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.