ಲಾಸ್ ಏಂಜಲೀಸ್: ಶಾಲೆಗಳಲ್ಲಿ ಯೋಗ ಕಲಿಸುವುದರಿಂದ ಹಿಂದುತ್ವವನ್ನು ಹೇರಿದಂತೆ ಅಥವಾ ಮಕ್ಕಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡಿದಂತೆ ಆಗುವುದಿಲ್ಲ ಎಂಬುದನ್ನು ಅಮೆರಿಕ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹಿಂದೂ ಧರ್ಮ ಮತ್ತು ಬೌದ್ಧ ಧರ್ಮವನ್ನು ಯೋಗದ ಮೂಲಕ ತಮ್ಮ ಮಕ್ಕಳ ಮೇಲೆ ಹೇರಲಾಗುತ್ತಿದೆ ಎಂದು ಆರೋಪಿಸಿ ಶಾಲೆಯೊಂದರ ವಿದ್ಯಾರ್ಥಿಗಳ ಪೋಷಕರು ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಆದರೆ ನ್ಯಾಯಾಲಯ ಈ ದಾವೆಯನ್ನು ವಜಾಗೊಳಿಸಿದ್ದು, ದೈಹಿಕ ಶಿಕ್ಷಣದ ಭಾಗವಾಗಿ ಶಾಲೆಗಳಲ್ಲಿ ಯೋಗವನ್ನು ಕಲಿಸಿಕೊಡಲಾಗುತ್ತಿದೆ. ಯೋಗದಿಂದ ಶಾಲೆಗಳಲ್ಲಿ ಹಿಂದುತ್ವವನ್ನು ಹೇರಲಾಗುತ್ತಿಲ್ಲ. ಯೋಗ ಎಂಬುದು ಜಾತ್ಯಾತೀತವಾದುದು ಎಂದು ಹೇಳಿದೆ.
5 ಸಾವಿರ ವರ್ಷಗಳ ಹಳೆಯ ಭಾರತದ ದೈಹಿ, ಮಾನಸಿಕ, ಆಧ್ಯಾತ್ಮಿಕ ಪ್ರಕ್ರಿಯೆಯಾದ ಯೋಗವನ್ನು ಅಮೆರಿಕಾzದ್ಯಂತ ಶಾಲೆಗಳಲ್ಲಿ ಕಲಿಸಿಕೊಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.