ಅಮೆರಿಕ: ನಾಸಾ ಮಂಗಳನ ಅಂಗಳಕ್ಕೆ ಕಳುಹಿಸಿರುವ ಬಹುನಿರೀಕ್ಷಿತ ಪರ್ಸಿವಿಯರೆನ್ಸ್ ಮಾರ್ಸ್ ರೋವರ್ ಮಂಗಳ ಗ್ರಹದಲ್ಲಿನ ಶಬ್ದವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಕೆಂಪು ಗ್ರಹದಲ್ಲಿ ಮನುಷ್ಯ ವಾಸಿಸಬಹುದೇ? ಎಂಬುದನ್ನೊಳಗೊಂಡಂತೆ ಹತ್ತು ಹಲವು ವಿಷಯಗಳನ್ನು ಅಧ್ಯಯನ ಮಾಡುವ ಉದ್ದೇಶದಡಿ ಈ ರೋವರ್ ಅನ್ನು ಅಭಿವೃದ್ಧಿಪಡಿಸಿ ಕಳುಹಿಸಿಕೊಡಲಾಗಿತ್ತು. ಈ ರೋವರ್ ಸದ್ಯ ಗ್ರಹದಲ್ಲಿ ತನ್ನ ಪ್ರಾಯೋಗಿಕ ಚಲನೆಯನ್ನ ನಡೆಸಿದ ಅಂತರದ ಬಳಿಕ ಈ ಧ್ವನಿ ತರಂಗವನ್ನು ಪಡೆದು ಭೂಮಿ ಮೇಲಿನ ನಾಸಾ ಕೇಂದ್ರಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಮಂಗಳನ ಈ ಧ್ವನಿ ತರಂಗವನ್ನು ಪಡೆದ ಮೊದಲ ರೋವರ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.
2020 ರ ಜುಲೈ 30 ರಂದು ಫ್ಲಾರಿಡಾದ ಉಡ್ಡಯನ ಕೇಂದ್ರದಿಂದ ಪರ್ಸಿವಿಯರೆನ್ಸ್ ರೋವರ್
ಹೊಂದಿರುವ ನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ಸುದೀರ್ಘ 203 ದಿನಗಳ ಬಳಿಕ 2021 ರ ಫೆಬ್ರವರಿ 18 ರಂದು ಮಂಗಳ ಗ್ರಹವನ್ನು ಈ ನೌಕೆ ತಲುಪಿದೆ. ನಾಸಾದ ಈ ಮಹತ್ವಾಕಾಂಕ್ಷೆಯ ಯೋಜನೆಯ ಹಿಂದೆ ಭಾರತೀಯ ಮಹಿಳೆ ಸ್ವಾತಿ ಮೋಹನ್ ಪ್ರಮುಖ ಪಾತ್ರ ವಹಿಸಿದ್ದರು.
🔊 Hear that? That’s the sound of me driving over Martian rocks. This is the first time we’ve captured sounds while driving on Mars.
Read full story: https://t.co/oqdnCJShjm pic.twitter.com/yKwypUSnE7
— NASA's Perseverance Mars Rover (@NASAPersevere) March 17, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.