ನವದೆಹಲಿ: ಕೊರೋನಾವೈರಸ್ ಮಹಾ ಸಾಂಕ್ರಾಮಿಕದ ಕಾರಣದಿಂದಾಗಿ ನೆಲಕಚ್ಚಿದ್ದ ಭಾರತದ ಆರ್ಥಿಕತೆ ಮತ್ತೆ ನಿಧಾನಕ್ಕೆ ಹಳಿಗೆ ಮರಳುತ್ತಿದೆ. 2020ರ ವರ್ಷದ ಡಿಸೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 0.4ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO – National Statistics Office) ಮಾಹಿತಿ ನೀಡಿದೆ. ಇದರೊಂದಿಗೆ ಭಾರತದ ಆರ್ಥಿಕತೆಯು V ಆಕಾರದಲ್ಲಿ ಚೇತರಿಕೆಯಾಗುತ್ತಿರುವುದು ಖಚಿತವಾಗಿದೆ.
ಆರ್ಥಿಕ ಹಿಂಜರಿತದಿಂದ ಬೆಳವಣಿಗೆಯ ಹಾದಿಗೆ ಮರಳಿದ ಜಿಡಿಪಿ ದೇಶದ ಜಿಡಿಪಿ ಶೇ. 0.4 ರಷ್ಟು ಬೆಳವಣಿಗೆ ಸಾಧಿಸಿದ್ದು ಮಹತ್ವದ ಬೆಳವಣಿಗೆ. ಕೊರೊನಾ ಬಿಕ್ಕಟ್ಟಿನ ಸಂದರ್ಭ ಆರ್ಥಿಕತೆಯು ಸತತ ಎರಡು ತ್ರೈಮಾಸಿಕದಲ್ಲಿ ಸಂಕುಚಿತಗೊಂಡ ನಂತರ ಇದೀಗ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದೆ.
2020-21 ನೇ ಆರ್ಥಿಕ ವರ್ಷದ ಮೊದಲೆರಡು ತ್ರೈಮಾಸಿಕದಲ್ಲಿ ಭಾರಿ ಕುಸಿತ ಕಂಡಿದ್ದ ಭಾರತದ ಜಿಡಿಪಿ ಇದೀಗ ಬೆಳವಣಿಗೆಯ ಹಾದಿಗೆ ಮರಳಿದ್ದು, ಮೂರನೇ ತ್ರೈಮಾಸಿಕ (ಅಕ್ಟೋಬರ್-ಡಿಸೆಂಬರ್) ದಲ್ಲಿ ಶೇ. 0.4 ಬೆಳವಣಿಗೆಯೊಂದಿಗೆ ದೇಶ ಆರ್ಥಿಕ ಹಿಂಜರಿತದಿಂದ ಹೊರಬಂದಿದೆ ಎಂದು ವರದಿ ಹೇಳಿದೆ.
2020ರಲ್ಲಿ ಕೊರೋನಾ ಲಾಕ್ ಡೌನ್ ಘೋಷಿಸಿದ ಬಳಿಕ ಆರ್ಥಿಕತೆ ಸಂಪೂರ್ಣ ಸ್ಥಗಿತವಾಗಿತ್ತು. ಇದರಿಂದಾಗಿ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಮೈನಸ್ 24.4% ಕುಸಿತಗೊಂಡಿತ್ತು. ಲಾಕ್ಡೌನ್ ತೆರವಾದ ಬಳಿಕ ಆರ್ಥಿಕತೆ ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.