ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ 2015-16ರ ಸಾಲಿನಲ್ಲಿ ಅಮೆರಿಕಾದ ನ್ಯಾನೋ/ಮೈಕ್ರೋ ಸೆಟ್ಲೈಟ್ನ್ನು ಉಡಾವಣೆಗೊಳಿಸಲಿದೆ. ಇದು ಇಸ್ರೋ ಉಡಾಯಿಸುತ್ತಿರುವ ಅಮೆರಿಕಾದ ಮೊದಲ ಸೆಟ್ಲೈಟ್ ಆಗಲಿದೆ.
‘ಇಸ್ರೋದ ವಾಣಿಜ್ಯ ಅಂಗ ಅಂಟ್ರಿಕ್ಸ್ ಕಾರ್ಪೋರೇಶನ್ ಲಿಮಿಟೆಡ್ ನ್ಯಾನೋ/ಮೈಕ್ರೋ ಸೆಟ್ಲೈಟನ್ನು ಉಡಾಯಿಸುವ ಒಪ್ಪಂದಕ್ಕೆ ಅಮರಿಕಾದೊಂದಿಗೆ ಸಹಿ ಹಾಕಿದೆ ಎಂದು’ ಇಸ್ರೋದ ಪಬ್ಲಿಕ್ ರಿಲೇಷನ್ ನಿರ್ದೇಶಕ ದೇವಿಪ್ರಸಾದ್ ಕಾರ್ಣಿಕ್ ತಿಳಿಸಿದ್ದಾರೆ.
ಈ ಸೆಟ್ಲೈಟ್ ವಿಎಸ್ಎಲ್ವಿಯ ಮೂಲಕ ಕಕ್ಷೆ ಸೇರಲಿದೆ.
ಇದುವರೆಗೆ ಇಸ್ರೋ 19ದೇಶಗಳ ಸೆಟ್ಲೈಟನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.